ಜಿಲ್ಲೆ

ಶಿರಸಂಗಿಗೆ ಬಸ್​ ಸೌಕರ್ಯ ಕಲ್ಪಿಸಲು ಆಗ್ರಹ

ಶಿರಸಂಗಿ: ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗಾಧಿ-ಕಾರಿ ಸಂತೋಷ ಕಮತ ಈಚೆಗೆ ಭೇಟಿ ನೀಡಿದರು.

ಅಗತ್ಯ ಕೆಲಸ&ಕಾರ್ಯ ಹಾಗೂ ವಿದ್ಯಾಭ್ಯಾಸಕ್ಕಾಗಿ ನಿತ್ಯ ಉದ್ಯೋಗಸ್ಥರು, ವಿದ್ಯಾರ್ಥಿಗಳು ನಗರಗಳಿಗೆ ತೆರಳಬೇಕಿದೆ. ಆದರೆ, ಬಸ್​ ಸೌಲಭ್ಯ ಇಲ್ಲವಾದ್ದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ, ಕೂಡಲೇ ಗ್ರಾಮಕ್ಕೆ ಸಮರ್ಪಕ ಬಸ್​ ವ್ಯವಸ್ಥೆ ಒದಗಿಸಬೇಕೆಂದು ಧಾರವಾಡ ವಿಭಾಗಾಧಿ-ಕಾರಿ ಸಂತೋಷಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಜನರ ಮನವಿಗೆ ಪ್ರತಿಕ್ರಿಯಿಸಿದ ವಿಭಾಗಾಧಿಕಾರಿ, ಶ್ರೀದಲ್ಲೇ ಬಸ್​ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಗ್ರಾಪಂ ಅಧ್ಯ ಮಲ್ಲಪ್ಪ ಕಪಲನ್ನವರ, ಸದಸ್ಯ ಮಲ್ಲಿಕಾರ್ಜುನ ಗೊರವನಕೊಳ್ಳ, ವಿಶ್ವಕರ್ಮ ವಿಕಾಸ ಸಂಸ್ಥೆ ಉಪಾಧ್ಯ ಸುನೀಲ ಸುಳ್ಳದ, ಪ್ರಕಾಶ ಪ್ರಸಾದ, ಪತ್ರೆಪ್ಪ ಪಟ್ಟೇದ, ಈಶ್ವರ ಪಟ್ಟೇದ, ಚಂದ್ರು ಕಡ್ಲಿಕೊಪ್ಪ ಇತರರಿದ್ದರು.