*ಎರೇಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ರಾಮನಗರ
ತಾಲೂಕಿನ ಕೂಟಗಲ್ ಹೋಬಳಿ ಎರೇಹಳ್ಳಿ ಗ್ರಾಮಕ್ಕೆ ಸರಿಯಾದ ವೇಳೆಗೆ ಬಸ್ಗಳು ಬರುತ್ತಿಲ್ಲ ಎಂದು ಶಾಲಾ - ಕಾಲೇಜು ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಗ್ರಾಮದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಎರೇಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ರಾಮನಗರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಮನಗರದಿಂದ ಕೂಟಗಲ್ ಮಾರ್ಗವಾಗಿ ಮಾಗಡಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಎರೇಹಳ್ಳಿ ದೊಡ್ಡ ಗ್ರಾಮವಾಗಿದ್ದು, ರಾಮನಗರದಿಂದ 12 ಕಿಮೀ ದೂರದಲ್ಲಿದೆ. ನೂರಾರು ವಿದ್ಯಾರ್ಥಿಗಳ ಓಡಾಟಕ್ಕೆ ಬಸ್ಗಳೇ ನಿರ್ಣಾಯಕ. ಈ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಬಿಟ್ಟರೆ ಯಾವುದೇ ಖಾಸಗಿ ಬಸ್ ಸಂಚರಿಸುವುದಿಲ್ಲ. ಹೆಚ್ಚಿನ ಬಸ್ ಅವಶ್ಯಕತೆ ಇದ್ದರೂ ಕೇವಲ ಬೆರಳೆಣಿಕೆಯಷ್ಟು ಬಸ್ಗಳು ಓಡಾಟ ನಡೆಸುತ್ತವೆ ವಿದ್ಯಾರ್ಥಿಗಳು ಆರೋಪಿಸಿದರು.
ಇರುವ ಬಸ್ಗಳು ಸರಿಯಾದ ವೇಳೆಗೆ ಬರುವುದಿಲ.
ಜತೆಗೆ ಹಳೇ ಬಸ್ಗಳನ್ನು ಓಡಿಸುತ್ತಿರುವ ಕಾರಣ ಬಸ್ಗಳು ಅಲ್ಲಲ್ಲೇ ಕೆಟ್ಟು ನಿಲ್ಲುತ್ತವೆ. ಎರೇಹಳ್ಳಿಗೆ ಬರುತ್ತಿದ್ದ ಬಸ್ ವಾರಕ್ಕೆ ಎರಡೂ ದಿನವೂ ಬರುತ್ತಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಾಮನಗರಕ್ಕೆ ಬರಬೇಕೆಂದರೆ ಬಸ್ಗಳೇ ಇಲ್ಲ. ಬೆಳಗಿನ ವೇಳೆಯಲ್ಲಿ ನಿಗದಿತ ಸಮಯಕ್ಕೆ ಬಸ್ ಬಾರದೆ ಶಾಲಾ&ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಬಸ್ ಟಕದ ಅಧಿಕಾರಿಗಳಿಗೆ ತಿಳಿಸಿದರೂ ಸೂಕ್ತ ಬಸ್ ವ್ಯವಸ್ಥೆ ಮಾಡಿಲ್ಲ. ಇದರಿಂದ ತರಗತಿಗೆ ಹೋಗಲು ಸಾಧ್ಯವಗುತ್ತಿಲ್ಲ. ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಬಸ್ಗಳನ್ನು ತಡೆದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಸ್ಗಳು ನಿಂತಲ್ಲೇ ನಿಂತವು. ಸ್ಥಳಕ್ಕೆ ಅಧಿಕಾರಿಗಳು ಬರಬೇಕು. ನಮ್ಮ ಸಮಸ್ಯೆ ಕೇಳಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಈ ವೇಳೆ ಗ್ರಾಮದ ಮುಖಂಡರು ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾರಿಗೆ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ, ನಿಮಗೂ ಶಾಲಾ& ಕಾಲೇಜಿಗೆ ಹೋಗಲು ತಡವಾಗುತ್ತಿದೆ ಎಂದು ವಿದ್ಯಾರ್ಥಿಗಳನ್ನು ಸಮಾಧಾನಿಸಿ, ಪ್ರತಿಭಟನೆ ಕೈಬಿಡಿಸಿ ಬಸ್ಗಳನ್ನು ಕಳುಹಿಸಿದರು.