filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಕಳ್ಳತನ, ದೌರ್ಜನ್ಯ ತಡೆಗೆ ಆಗ್ರಹ

ಎಂ.ಎಸ್​.ಹಿರೇಮಠ ಬೆಳಗಾವಿ

ಯರಗಟ್ಟಿ: ತಾಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನ, ಗೂಂಡಾಗಿರಿ ಹಾಗೂ ದೌರ್ಜನ್ಯ ಸೇರಿ ಜನರ ನೆಮ್ಮದಿಗೆ ಭಂಗ ತರುತ್ತಿರುವ ಕಿಡಗೇಡಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬುಧವಾರ ಯರಗಟ್ಟಿ ಬಂದ್​ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಸ್ಥಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಮೆರವಣಿಗೆ ನಡೆಸಿ, ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ವರ್ತಕರು ಅಂಗಡಿಗಳನ್ನು ಸಂಪೂರ್ಣ ಬಂದ್​ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ಯರಗಟ್ಟಿಯಲ್ಲಿ ಶ್ರೀ ಪೊಲೀಸ್​ ಠಾಣೆ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ, ಭಾಸ್ಕರ ಹಿರೇಮೇತ್ರಿ ಮಾತನಾಡಿ, ತಾಲೂಕಿನಲ್ಲಿ ಚಾಕು ತೋರಿಸಿ ಬೆದರಿಸುವ ಸಂಸತಿಗೆ ಕಡಿವಾಣ ಹಾಕಬೇಕು. ಗಣೇಶೋತ್ಸವದ ಸಂದರ್ಭದಲ್ಲಿ ಯುವಕರ ಮೇಲೆ ಸುಖಾಸುಮ್ಮನೇ ದಾಖಲಿಸಿರುವ ಪ್ರಕರಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಂತೋಷ ಚನ್ನಮೇತ್ರಿ, ವೆಂಕಣ್ಣ ಹುರಕನವರ ಮಾತನಾಡಿ, ಜಮೀನುಗಳಲ್ಲಿ ಕೊಳವೆಬಾವಿ ಮೋಟಾರ್​, ಪಂಪ್​, ಕೇಬಲ್​ ಮತ್ತು ಪೈಪ್​ಗಳು ನಿರಂತವಾಗಿ ಕಳುವಾಗುತ್ತಿವೆ ಎಂದು ದೂರಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಸೀಲ್ದಾರ್​ ಎಂ.ವಿ.ಗುಂಪ್ಪಗೋಳ, ಡಿವೈಎಸ್ಪಿ ಚಿದಂಬರ ವಿ.ಎಂ., ಪಟ್ಟಣದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಶಾಂತಿ, ಸುವ್ಯವಸ್ಥೆ ಕಾಪಾಡಲಾಗುವುದು. ಕೀಡಿಗೇಡಿಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ವಿಠ್ಠಲ ದೇವರಡ್ಡಿ, ಮಹಾಂತೇಶ ಜಕಾತಿ, ಸಂತೋಷ ಹಾದಿಮನಿ, ವೆಂಕಟೇಶ ದೇವರಡ್ಡಿ, ವಿಶಾಲಗೌಡ ಪಾಟೀಲ, ರಾಜೇಂದ್ರ ವಾಲಿ, ವಿಠ್ಠಲ ಬಂಟನೂರ, ರತ್ನಾಕರ ಶೆಟ್ಟಿ, ಮಲಿಕಸಾಬ್​ ಬಾಗವಾನ, ರಾಜೇಂದ್ರ ಶೆಟ್ಟಿ, ಆನಂದ ಭಾಗೋಡಿ, ಗಿರೀಶ ಪಾಟೀಲ, ಶಶಿಕಾಂತ ಹಾದಿಮನಿ, ನಾಸೀರ್​ ಖಾಜಿ, ಶಿವಾನಂದ ಯರಗಣವಿ, ಸದಾನಂದ ಹಣಬರ, ಅಶೋಕ ಗಾಣಗಿ ಹಾಗೂ ವಿವಿಧ ಸಂಟನೆ ಸದಸ್ಯರು ಪಾಲ್ಗೊಂಡಿದ್ದರು.