ಜಿಲ್ಲೆ

ಪಂಢರಾಪುರಕ್ಕೆ ಪಾದಯಾತ್ರೆ

ಮುದಗಲ್: ಕುಷ್ಟಗಿ ತಾಲೂಕಿನ ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಪಟ್ಟಣದ ಮೂಲಕ ಪಂಢರಾಪುರಕ್ಕೆ ಭಾನುವಾರ ಪಾದಯಾತ್ರೆ ತೆರಳಿದರು. ಪ್ರತಿ ವಷರ್ದಂತೆ ಪಾದಯಾತ್ರೆ ತೆರಳುತ್ತಿದ್ದು 450 ಕಿ.ಮೀ. ದೂರದ ಪಂಢರಾಪುರ ದೇಗುಲಕ್ಕೆ ಎಂಟು ದಿನಗಳ ಅವಧಿಯಲ್ಲಿ ಪಾದಯಾತ್ರೆ ಪೂರ್ಣಗೊಳಿಸಲಾಗುವುದು. ನಾಡಿನ ಒಳಿತಿಗಾಗಿ ಹಾಗೂ ಉತ್ತಮ ಮಳೆ ಬೆಳೆ ಸಂರಕ್ಷಣೆಗೆ ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಪಾದಯಾತ್ರಿಯೊಬ್ಬರು ತಿಳಿಸಿದರು. ಪಟ್ಟಣದಲ್ಲಿ ನಗರೇಶ್ವರ ದೇವಸ್ಥಾನದಲ್ಲಿ ಪಾದಯಾತ್ರಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.