ತೆಲಸಂಗ ಸಮೀಪದ ಕನ್ನಾಳ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜಕ್ಕಣ್ಣ ಮೀಸಿ ಅವರನ್ನು ಸತ್ಕರಿಸಲಾಯಿತು. ಯಂಕಣ್ಣ ಅಸ್ಕಿ, ಭೀಮಣ್ಣ ದಳವಾಯಿ, ಸಂಜೀವ ಅಸ್ಕಿ ಇತರರಿದ್ದರು. 
ಜಿಲ್ಲೆ

ಮನಸ್ಸು ಶುದ್ಧವಾಗಿರಲು ಸತ್ಸಂಗ ಅವಶ್ಯ

ರಾಘವೇಂದ್ರಗೌಡ ಭೀ ಪಾಟೀಲ್

ತೆಲಸಂಗ: ಕಲುಷಿತಗೊಂಡ ಮನಸ್ಸನ್ನು ನಿರ್ಮಲಗೊಳಿಸಲು ಸತ್ಸಂಗ ಮತ್ತು ಪ್ರವಚನಗಳು ಅವಶ್ಯ ಎಂದು ನಿವೃತ್ತ ಶಿಕ್ಷಕ ಜಕ್ಕಣ್ಣ ಮೀಸಿ ಹೇಳಿದರು.

ಸಮೀಪದ ಕನ್ನಾಳ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಚನದ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.

ಕನ್ನಾಳ ಹಿರೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬದುಕು ಸಾರ್ಥಕವಾಗಿಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನ ಮುಖ್ಯ ಎಂದರು. ಪಿಕೆಪಿಎಸ್ ಅಧ್ಯಕ್ಷ ಯಂಕಣ್ಣ ಅಸ್ಕಿ, ಭೀಮಣ್ಣ ದಳವಾಯಿ, ಸಂಜೀವ ಅಸ್ಕಿ, ಮಹಾದೇವ ದಳವಾಯಿ, ಶ್ರೀಮಂತ ಅಸ್ಕಿ, ಬಸಗೊಂಡ ಇಸರಗೊಂಡ, ಧರೆಪ್ಪ್ಪ ದಳವಾಯಿ ಇತರರು ಇದ್ದರು.