ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸ ಆನಂದ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಶಾಸಕ ನೇಮಿರಾಜ ನಾಯ್ಕ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮಂಜುನಾಥಗೌಡ್ರು, ಕೊಟ್ರೇಶಗೌಡ, ಜಿ.ಚಿನ್ನಪ್ಪ, ಜೆ.ಶಿವಾನಂದಪ್ಪ, ಚಿತ್ತವಾಡ್ಗಿ ಪ್ರಕಾಶ್ ಇತರರಿದ್ದರು. 
ಜಿಲ್ಲೆ

ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಮ್ಮ ಸುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಂಡಲ್ಲಿ ನಮಗೆ ಯಾವುದೇ ರೋಗ-ರುಜನಗಳು ಬರುವುದಿಲ್ಲ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ತಾಲೂಕಿನ ಕಡಲಬಾಳು ಗ್ರಾಪಂ ವ್ಯಾಪ್ತಿಯ ಹೊಸ ಆನಂದ ದೇವನಹಳ್ಳಿಯಲ್ಲಿ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಜಾಗೃತಿ ಅಭಿಯಾನದಲ್ಲಿ ಸೋಮವಾರ ಮಾತನಾಡಿದರು.

ಈಗಾಗಲೇ ಎಲ್ಲ ಗ್ರಾಪಂ ವ್ಯಾಪ್ತಿಗಳಲ್ಲಿ ಸೆ.17ರಿಂದಲೇ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಅ.2 ರವರೆಗೂ ಜಾಗೃತಿ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಭಾಗವಹಿ ಪ್ರತಿಯೊಬ್ಬರೂ ಮನೆಗಳ ಸುತ್ತಲಿನ ಪ್ರದೇಶ, ದೇಗುಲ, ಶಾಲೆ ಆವರಣದ, ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲತಾ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯರಾದ ಕೆ.ಸಂತೋಷ್, ಎಚ್.ದೊಡ್ಡಬಸಪ್ಪ, ಒಂಟಿಗೋಡಿ ವಿರುಪಣ್ಣ, ಸಿ.ರಮೇಶ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಹೋಟೆಲ್ ಸಿದ್ದರಾಜ, ತಾಪಂ ಇಒ ಡಾ.ಜಿ.ಪರಮೇಶ್ವರಪ್ಪ, ಯೋಜನಾಧಿಕಾರಿ ನಾಗರಾಜ ನಾಯ್ಕ, ಪಿಡಿಒ ಸುಜಾತಾ ಇತರರಿದ್ದರು.