ಬೆಳಗಾವಿ ತಾಲೂಕಿನ ಅಷ್ಟೇ ಗ್ರಾಪಂ ಅಧ್ಯಕ್ಷರಿಗೆ ಸದಸ್ಯರು ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದರು. 
ಜಿಲ್ಲೆ

ಹಸ್ತಕ್ಷೇಪಕ್ಕೆ ಬೇಸತ್ತು ಗ್ರಾಪಂ ಸದಸ್ಯರ ರಾಜೀನಾಮೆ

ಬೆಳಗಾವಿ: ಆಡಳಿತ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಇಬ್ಬರು ಪುತ್ರರ ಹಸ್ತಕ್ಷೇಪದಿಂದ ಬೇಸತ್ತು ತಾಲೂಕಿನ ಅಷ್ಟೆ ಗ್ರಾಪಂ ಸದಸ್ಯರು ಈಚೆಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯರಾದ ಮಲ್ಲಿಕಜಾನ್ ಮುಲ್ಲಾ, ದಾಕ್ಷಾಯಿಣಿ ಕೋಲಕಾರ, ಕಲ್ಲಪ್ಪ ಪಾಟೀಲ, ಲಕ್ಷ್ಮೀ ಅಷ್ಟೇಕರ, ಭೀಮರಾವ್ ನಾಯಿಕ, ಪ್ರತೀಕ್ಷಾ ಪಾಟೀಲ, ರಂಜನಾ ಗಿರಿಯಾಲಕರ, ಶಾಹೀದ್ ಮುಲ್ಲಾ ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದ್ದಾರೆ.