ಜಿಲ್ಲೆ

ಏತ ನೀರಾವರಿ ಪೂರ್ಣಗೊಳಿಸಲು ಕ್ರಮ - ಶ್ರೀಮಂತ ಪಾಟೀಲ

Belagavi

ಸಂಬರಗಿ: ಚುನಾವಣೆಯಲ್ಲಿ ನೀಡಿದ ಆಶ್ವಾಸನೆ ಪ್ರಕಾರ ಖಿಳೇಗಾಂವ ಬಸವೇಶ್ವರ ಏತ ನಿರಾವರಿ ಯೋಜನೆಯನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಿ, ಗಡಿಭಾಗದ ಗ್ರಾಮಗಳ ರೈತರ ಕನಸು ನನಸು ಮಾಡುತ್ತೇನೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

ಸಮೀಪದ ಕೆಂಪವಾಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಹಣದ ಕೊರತೆ ಇಲ್ಲ. ಕಾಮಗಾರಿ ಗುಣಮಟ್ಟದ್ದಾಗಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಕುರಿತು ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತಂದಿದ್ದೇನೆ ಎಂದರು. ಗಡಿ ಭಾಗದ 23 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಶೀಘ್ರ ಜಾರಿಗೆ ತರುತ್ತೇನೆ ಎಂದು ಹೇಳಿದರು. ನಿಂಗಪ್ಪ ಖೋಕಲೆ, ಶಿವಾನಂದ ಮದಬಾವಿ, ಆರ್.ಎಂ.ಪಾಟೀಲ, ಮಹಾದೇವ ಕೋರೆ, ವಿನಾಯಕ ಬಾಗಡಿ ಇತರರು ಇದ್ದರು.