ಮಾನ್ವಿಯಲ್ಲಿ ರಾಜ್ಯ ಮಾದಿಗ ನೌಕರರ ಸಂಘದಿಂದ ಆಯೋಜಿಸಿದ್ದ ಒಳಮೀಸಾಲಾತಿ ಹೋರಾಟಗಾರರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮವನ್ನು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಉದ್ಘಾಟಿಸಿದರು. ಮುಖಂಡರಾದ ಅಂಬಣ್ಣ ಅರೋಲಿಕರ್, ಎಂ.ವಿರೂಪಾಕ್ಷಿ,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶಕುರ್ಡಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಮನೋಹರ್, ಡಾ.ಜೆ.ಎಲ್.ಈರಣ್ಣ ಇತರರಿದ್ದರು. 
ಜಿಲ್ಲೆ

ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ

ರುದ್ರಪ್ಪ ವಾಲಿ

ಮಾನ್ವಿ: ಮಾದಿಗ ಸಮುದಾಯ 30 ವರ್ಷಗಳಿಂದ ನಡೆಸಿದ ಹೋರಾಟ ಪರಿಗಣಿಸಿ ಶೇ.17ರ ಮೀಸಲಾತಿಯಲ್ಲಿ ಎಡ ಮತ್ತು ಬಲ ಸಮುದಾಯಗಳಿಗೆ ಶೇ. ತಲಾ 6 ಮೀಸಲಾತಿ ಹಂಚಿಕೆ ಮಾಡಿದೆ ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.

ಪಟ್ಟಣದ ಬಿ.ವಿ.ಆರ್.ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ರಾಜ್ಯ ಮಾದಿಗ ನೌಕರರ ಸಂಘದಿಂದ ಆಯೋಜಿಸಿದ್ದ ಒಳಮೀಸಲಾತಿ ಹೋರಾಟಗಾರರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸಾಮಾಜಿಕ ಸಮೀಕ್ಷೆ ನಡೆಸಿದ ಸದಾಶಿವ ಆಯೋಗ, ಮಧುಸ್ವಾಮಿ ಅಯೋಗ ಸಮಿತಿ ಹಾಗೂ ಇತ್ತೀಚಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ ಏಕ ಸಮಿತಿ ಅಯೋಗಗಳು ರಾಜ್ಯದಲ್ಲಿ ಸಮೀಕ್ಷೆ ನಡೆಸಿ ತಮ್ಮ ವರದಿಗಳನ್ನು ನಿಡಿದ್ದು ಸರ್ಕಾರ ಈ ತೀರ್ಮಾನ ಮಾಡಿದೆ ಎಂದರು.

ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಸಮುದಾಯದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಿದ್ದು ಅದಿ ಆಂಧ್ರ ಮತ್ತು ಅದಿ ದ್ರಾವಿಡ ಗೊಂದಲ ನಿವಾರಣೆಗೆ ಹಾಗೂ ನಮ್ಮ ಸಮುದಾಯಕ್ಕೆ ಶೇ.7 ಹೆಚ್ಚಿನ ಮೀಸಲಾತಿ ಪಡೆಯುವುದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಪ್ರಮುಖರಾದ ಎಂ.ವಿರೂಪಾಕ್ಷಿ, ಚಂದ್ರಶೇಖರ, ದಾನಪ್ಪ ನಿಲೋಗಲ್, ಎಸ್.ಮಾರೆಪ್ಪ, ಹೇಮರಾಜ ಅಸ್ಕಿಹಾಳ್, ವಿವಿಧ ಇಲಾಖೆ ಅಧಿಕಾರಿಗಳಾದ ಕುಂತೆಪ್ಪ, ಸುರೇಶ ಜಗ್ಲಿ, ಸಂಕರ ಕುರ್ಡಿ, ನರಸಿಂಹ ಸಿ.ಎಂ. ಚನ್ನಬಸವ ಮಾಡಗಿರಿ, ಮನೋಹರ್ ಮೂಕಪ್ಪ ಕಟ್ಟಿಮನಿ, ಚಂದ್ರಶೇಖರ ಕುರ್ಡಿ ಇತರರಿದ್ದರು.