ಜಿಲ್ಲೆ

ರೈತರಿಗೆ ನ್ಯಾಯ ಒದಗಿಸಲು ಆಗ್ರಹ

ಪ್ರಶಾಂತ ಹೂಗಾರ

ರಾಯಬಾಗ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ರಾಜ್ಯ ಸರ್ಕಾರದ ನಡೆ ಖಂಡಿಸಿ ಶಾಸಕ ಡಿ.ಎಂ.ಐಹೊಳೆ ನೇತೃತ್ವದಲ್ಲಿ ತಾಲೂಕು ಬಿಜೆಪಿ ವತಿಯಿಂದ ತಹಸೀಲ್ದಾರ್ ಸುರೇಶ ಮುಂಜೆ ಅವರ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ರೈತರು, ಮಠ-ಮಂದಿರಗಳು ಹಾಗೂ ದೇವಾಲಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಹುನ್ನಾರ ರೂಪಿಸಿದೆ. ಕೂಡಲೇ ರಾಜ್ಯ ಸರ್ಕಾರ ನೋಟಿಸ್ ಹಿಂಪಡೆದು ರೈತರಿಗೆ ನ್ಯಾಯ ಒದಗಿಸಿಬೇಕೆಂದು ಒತ್ತಾಯಿಸಿದರು.

ರಾಯಬಾಗ ಬಿಜೆಪಿ ತಾಲೂಕಾಧ್ಯಕ್ಷ ಪೃಥ್ವಿರಾಜ ಜಾಧವ, ಕುಡಚಿ ಬಿಜೆಪಿ ತಾಲೂಕಾಧ್ಯಕ್ಷ ಶ್ರೀಧರ ಮೂಡಲಗಿ, ಮಹೇಶ ಬಾತೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಬಸವರಾಜ ಸನದಿ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ರಾಜಶೇಖರ ಖನದಾಳೆ, ಸಂಗಣ್ಣ ದತ್ತವಾಡೆ, ಅಂಕುಶ ಜಾಧವ ಇತರರಿದ್ದರು.

ನಿಪ್ಪಾಣಿ ವರದಿ: ವಕ್ಫ್ ಹೆಸರಲ್ಲಿ ರೈತರು, ಜನ ಸಾಮಾನ್ಯರು, ಶಾಲೆ ಹಾಗೂ ಮಠ-ಮಂದಿರಗಳ ಜಮೀನನ್ನು ಕಬಳಿಸಲು ಯತ್ನಿಸುತ್ತಿರುವ ವಕ್ಫ್ ಬೋರ್ಡ್‌ನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ, ಬಿಜೆಪಿ ತಾಲೂಕು ಘಟಕ ವತಿಯಿಂದ ನಗರದ ಧರ್ಮವೀರ ಸಂಭಾಜಿ ಮಹಾರಾಜ ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನಡೆಸಲಾಯಿತು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದು ನರಾಟೆ, ನಗರಸಭೆ ಅಧ್ಯಕ್ಷೆ ಸೋನಾಲ್ ಕೊಠಡಿಯಾ, ಪ್ರಣವ ಮಾನವಿ, ಶ್ರೀಕಾಂತ್ ಬನ್ನೆ ಮಾತನಾಡಿದರು. ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ವಿಶ್ವನಾಥ ಕಮತೆ, ರಾಜು ಗುಂಡೇಶಾ, ಸಮಿತ ಸಾಸನೆ, ರಮೇಶ ಪಾಟೀಲ, ವಿನಾಯಕ ಪಾಟೀಲ, ಮಿಥುನ ಪಾಟೀಲ, ಗೀತಾ ಪಾಟೀಲ, ಸಂತೋಷ ಸಾಂಗಾವಕರ, ಸುಜಾತಾ ಕದಂ, ಅರುಣಾ ಮುದ್ಕುಡೆ, ಪ್ರಭಾವತಿ ಸೂರ್ಯವಂಶಿ, ಸುನೀಲ ಪಾಟೀಲ, ಎಸ್.ಎಸ್. ಧವಣೆ, ದಿಲೀಪ್ ಚವ್ಹಾಣ ಇತರರಿದ್ದರು.