ಮಹಾರಾಷ್ಟ್ರಾದ ಶಿರೋಳ ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಜ್ಯೋತಿಕುಮಾರ ಪಾಟೀಲ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಂಬಲಿಗರು ಸತ್ಕರಿಸಿದರು. ಪ್ರವೀಣ ಪಾಟೀಲ, ಪಿಂಟು ಲಾಂಡಗೆ, ಪವನ ಪಾಟೀಲ, ಬಾಳಾಸಾಬ ಪಾಟೀಲ, ಸುಕುಮಾರ ಲಾಂಡಗೆ, ಭಗತ ಪಾಟೀಲ ಇತರರಿದ್ದರು. 
ಜಿಲ್ಲೆ

ರೈತರಿಗೆ ಸೌಕರ್ಯ ಒದಗಿಸಲು ಶ್ರಮ

ಪ್ರಶಾಂತ ಹೂಗಾರ

ಕಾಗವಾಡ: ಮಹಾರಾಷ್ಟ್ರದ ಶಿರೋಳ ತಾಲೂಕಿನ ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಂಡಳ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆಯಲ್ಲಿ ಕಾಗವಾಡ ಪಟ್ಟಣದ ಜ್ಯೋತಿಕುಮಾರ ಪಾಟೀಲ ಅವರು 12 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಜಯಶಾಲಿಯಾದರು.

ಜ್ಯೋತಿಕುಮಾರ ಪಾಟೀಲ ಮಾತನಾಡಿ, ದತ್ತ ಸಕ್ಕರೆ ಕಾರ್ಖಾನೆಗೆ ಕರ್ನಾಟಕದಿಂದ ಸುಮಾರು 10 ಲಕ್ಷ ಟನ್ ಕಬ್ಬು ಪೂರೈಕೆಯಾಗುತ್ತದೆ. ಎಲ್ಲ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ದೊರೆಯುವ ಸೌಲಭ್ಯ ಒದಗಿಸಲು ಶ್ರಮಿಸುತ್ತೇನೆ ಎಂದರು.

ಪಟ್ಟಣಕ್ಕೆ ಆಗಮಿಸಿದ ಜ್ಯೋತಿಕುಮಾರ ಅವರಿಗೆ ಬೆಂಬಲಿಗರು ಗುಲಾಲ ಎರಚಿ ಸಂಭ್ರಮಿಸಿದರು. ಪ್ರವೀಣ ಪಾಟೀಲ, ಪಿಂಟು ಲಾಂಡಗೆ, ಪವನ ಪಾಟೀಲ, ಬಾಳಾಸಾಬ ಪಾಟೀಲ, ಸುಕುಮಾರ ಲಾಂಡಗೆ, ಭಗತ ಪಾಟೀಲ ಇತರರಿದ್ದರು.