ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಕೇಂದ್ರದಲ್ಲಿ ಬುಧವಾರ ಎಸ್. ಜಿ. ಬಾಳೇಕುಂದ್ರಿ ಅವರ 32ನೇ ಪುಣ್ಯ ಸ್ಮರಣೆ ಆಚರಿಸಲಾಯಿತು. ಬಿ.ವೈ. ಬಂಡಿವಡ್ಡರ, ಸೋಮನಗೌಡ ಸುಳೇಭಾವಿ, ಸಿ.ಬಿ. ಹಿರೇಮಠ, ಪ್ರೊ. ಪ್ರಶಾಂತ ಇತರರಿದ್ದರು. 
ಜಿಲ್ಲೆ

ದಿ.ಬಾಳೇಕುಂದ್ರಿಗೆ ಗೌರವ ನಮನ

ಬೆಳಗಾವಿ: ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ)ನ ಬೆಳಗಾವಿ ಕೇಂದ್ರದಲ್ಲಿ ಬುಧವಾರ ಖ್ಯಾತ ಇಂಜಿನಿಯರ್, ನೀರಾವರಿ ತಜ್ಞ ಎಸ್.ಜಿ. ಬಾಳೇಕುಂದ್ರಿ ಅವರ 32ನೇ ಪುಣ್ಯ ಸ್ಮರಣೆ ಆಚರಿಸಲಾಯಿತು.

ಧಾರವಾಡದ ವಾಲ್ಮಿ ಅಧೀಕ್ಷಕ ಇಂಜಿನಿಯರ್ ಬಿ.ವೈ.ಬಂಡಿವಡ್ಡರ ಅತಿಥಿಯಾಗಿ ಆಗಮಿಸಿ, ಕರ್ನಾಟಕದ ಜಲ ಸಂಪನ್ಮೂಲಗಳು-ಅದರ ಅತ್ಯುತ್ತಮ ಬಳಕೆಗೆ ಇಂದಿನ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು. ಬೈಕಾಪುರದ ಖ್ಯಾತ ಸಿವಿಲ್ ಇಂಜಿನಿಯರಿಂಗ್ ಗುತ್ತಿಗೆದಾರ ಸೋಮನಗೌಡ ಸುಳೇಬಾವಿ ಅವರನ್ನು ಸನ್ಮಾನಿಸಲಾಯಿತು.

ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಬೆಳಗಾವಿ ಸೆಂಟರ್‌ನ ಅಧ್ಯಕ್ಷ ಸಿ.ಬಿ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪ್ರಶಾಂತ ಪರಿಚಯಿಸಿದರು. ಪ್ರೊ. ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಹಿರಿಯ ಇಂಜಿನಿಯರ್‌ಗಳಾದ ಎಸ್.ಎಸ್. ಖಂಗವಿ, ಪಿ.ಎಂ. ಗಾಣಿಗೇರ, ವಿಲಾಸ ಬಾದಾಮಿ ಇದ್ದರು.