ಹುಬ್ಬಳ್ಳಿ: ಕಾರ್ನಿಯಾ ಅಂಧತ್ವಮುಕ್ತ ಭಾರತ ಅಭಿಯಾನದ ಅಂಗವಾಗಿ ಗುರುವಾರ ವಿದ್ಯಾನಗರದ ಕನಕದಾಸ ಕಾಲೇಜಿನಿಂದ ಕಿಮ್್ಸ ಆವರಣದವರೆಗೆ ಸಾರ್ವಜನಿಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡರು.
ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿ, ನಾನು ಮರಣಾನಂತರ ನೇತ್ರದಾನಕ್ಕೆ ವಾಗ್ದಾನ ಮಾಡಿದ್ದೇನೆ. ಪ್ರತಿಯೊಬ್ಬರು ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿನಲ್ಲಿ ಬೆಳಕಾಗಬೇಕು ಎಂದರು.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ನೇತ್ರದಾನದ ಮಹತ್ವದ ಬಗ್ಗೆ ತಿಳಿಯಬೇಕಾದರೆ ಹೆಚ್ಚು ಜಾಗೃತಿ ಕಾರ್ಯಕ್ರಮ ನಡೆಯಬೇಕು. ಪ್ರತಿಯೊಬ್ಬರೂ ಜೀವಿತ ಅವಧಿಯಲ್ಲಿ ರಕ್ತದಾನ ಮಾಡಿದರೆ, ಮರಣಾನಂತರ ನೇತ್ರದಾನ ಮಾಡಬೇಕು. ಅಂಧರ ಬಾಳಿನಲ್ಲಿ ಬೆಳಕಾಗಲು ನೇತ್ರದಾನ ಮಾಡುವುದು ಅವಶ್ಯ ಎಂದು ಹೇಳಿದರು.
ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಎಸ್. ಬಿ.ಶೆಟ್ಟಿ, ಕಾರ್ಯದರ್ಶಿ. ಡಾ. ಸುಭಾಷ ಬಬ್ರುವಾಡ, ಉಪಾಧ್ಯಕ್ಷ ಡಾ. ಸುನಿಲ ಗೋಖಲೆ, ಡಾ. ನಾಗಲಿಂಗ ಮುರಗಿ, ಸರ್ವೆಶ ಸ್ವಾಮಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಶ್ರೀಧರ ನಾಡಿಗೇರ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಜೇಥಿಯ ಫೌಂಡೇಷನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕನಕದಾಸ ಕಾಲೇಜ್ ಪ್ರಾಚಾರ್ಯ ಪೊ›. ಸಂದೀಪ ಬೂದಿಹಾಳ, ಡಾ. ಸುರೇಶ ಹೊರಕೇರಿ,
ಕಿಮ್ಸ್ ಆವರಣದಲ್ಲಿ ನೇತ್ರದಾನ ಮಹಾದಾನ ಕುರಿತು ಜಾಗೃತಿ ನಾಟಕವನ್ನು ಕಿಮ್ಸ್ ವಿದ್ಯಾರ್ಥಿಗಳು ಪ್ರದರ್ಶಿಸಿದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಮಜೇಥಿಯಾ ಫೌಂಡೇಷನ್ ಫಾರ್ ಸೇವಾ, ಕೆಎಲ್ಇ ತಾಂತ್ರಿಕ ವಿವಿ ಸಹಯೋಗ ನೀಡಿದ್ದವು.