ನರಸಿಂಹನಗಿರಿ ಗ್ರಾಮದಲ್ಲಿ ಶುಕ್ರವಾರ ಕೂಡ್ಲಿಗಿ ಸರ್ಕಾರಿ ಪಿಯು ಕಾಲೇಜಿನಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದ ಚಾಲನೆ ವೇಳೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಪ್ರಾಚಾರ್ಯೆ ಡಾ.ಕೊತ್ಲಮ್ಮ, ಸುಮಾ ಗಣೇಶ್, ಬಸಟಪ್ಪ, ಹನುಮಂತರಾಯ ಇದ್ದರು. 
ಜಿಲ್ಲೆ

ಹಳ್ಳಿ ಜನರಿಗೆ ಸ್ವಚ್ಛತೆ ಅರಿವು ಮೂಡಿಸಿ

ನರೇಶ್ ಕುಮಾರ್

ಕಾನಹೊಸಹಳ್ಳಿ: ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ, ಪರಿಸರ ಮತ್ತು ಸ್ವಚ್ಛತೆ ಅರಿವು ಮೂಡಿಸುವುದು ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ನರಸಿಂಹನಗಿರಿ ಗ್ರಾಮದಲ್ಲಿ ಶುಕ್ರವಾರ ಕೂಡ್ಲಿಗಿ ಸರ್ಕಾರಿ ಪಿಯು ಕಾಲೇಜಿನಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಎನ್ನೆಸ್ಸೆಸ್ ಶಿಬಿರ ಗ್ರಾಮೀಣ ಭಾಗದಲ್ಲಿ ಆಯೋಜನೆ ಮಾಡುವುದರಿಂದ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಅಲ್ಲದೆ ಪಟ್ಟಣದ ವಿದ್ಯಾರ್ಥಿಗಳು ಹಳ್ಳಿಗರ ಜೀವನ ಕ್ರಮ ಮತ್ತು ಅವರೊಂದಿಗೆ 10 ದಿನ ಕಳೆಯುವುದು, ಗ್ರಾಮೀಣ ಸಾಂಸ್ಕೃತಿಕ ಸೊಗಡು ತಿಳಿಯಬಹುದು ಎಂದರು.

ಪ್ರಾಚಾರ್ಯೆ ಡಾ.ಕೊತ್ಲಮ್ಮ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುಮಾ ಗಣೇಶ್, ಉಪನ್ಯಾಸಕರಾದ ನಾಗರಾಜ ಕೊಟ್ಟಪ್ಪಗಳ, ಕೊಟ್ರೇಶ್, ಆಕಾಶ್, ರಾಘವೇಂದ್ರ, ಪ್ರೌಢಶಾಲೆಯ ಮುಖ್ಯಶಿಕ್ಷಕ ಬಸಟೇಪ್ಪ, ಕೊಟ್ರೇಶ್ ಹನುಮಂತರಾಯ ಇದ್ದರು.