ಹರಪನಹಳ್ಳಿ: ಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ
ಎಂ.ಎಂ.ಜೆ.ಹರ್ಷವರ್ಧನ ಮಂಗಳವಾರ ಹೇಳಿದರು.
ಪಟ್ಟಣದ ಶ್ರೀ ಉಜ್ಜಿಯಿನಿ ಜಗದ್ಗುರು ಮರುಳಾರಾಧ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ಸಾಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: 5ರಂದು ಸಿದ್ದೇಶ್ವರ ಸ್ವಾಮೀಜಿ ನೆನಪಿನ ಉಪನ್ಯಾಸ
ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಉಜ್ಜಯಿನಿ ಕಾಲೇಜು ಆರಂಭವಾಗಿದ್ದು ರ‌್ಯಾಂಕ್ ಪಡೆಯುವ ಮೂಲಕ ಕೀರ್ತಿ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಕಾಲೇಜಿನಲ್ಲಿ ಉತ್ತಮ ಬೋಧನೆಯಿದ್ದು, ಉಪನ್ಯಾಸಕರು ತಮ್ಮ ಶ್ರಮದ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ನಿರಂತರವಾಗಿ ಕಾಲೇಜಿಗೆ ರ‌್ಯಾಂಕ್ ಬರುತ್ತಿದ್ದು ಇದಕ್ಕೆ ಕಾಲೇಜಿನ ಗುರುಗಳು, ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಕಾರಣ ಎಂದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿ ತಲುಪಬೇಕು. ಉಜ್ಜಿಯಿನಿ ಕಾಲೇಜು ರಾಜ್ಯದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ತಾಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಯಬೇಕು ಎಂದರು.
ಉಜ್ಜಿಯಿನಿ ಜ್ಞಾನ ಗುರುಪೀಠದ ನಿರ್ದೇಶಕ ಉಚ್ಚಂಗಿ ದುರ್ಗದ ಬಿ. ಶಿವಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ ಗುರಿ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು.
ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಜೆ.ಎಫ್ ಪ್ರೊ ಬಿ.ಬಿ. ನಂದ್ಯಾಲ್ ವಿಶೇಷ ಉಪನ್ಯಾಸ ನೀಡಿದರು. ಕಾಲೇಜು ವ್ಯವಸ್ಥಾಪಕ ಎಂ.ಜಿ.ರುದ್ರಯ್ಯ, ಪ್ರಭಾರಿ ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ, ನಿವೃತ್ತ ಕನ್ನಡ ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ, ಉಪನ್ಯಾಸಕರಾದ ಸೋಮರೆಡ್ಡಿ, ಚನ್ನಬಸಪ್ಪ, ಎಸ್.ಕೊಟ್ರೇಶ, ಚಿಕ್ಕಪ್ರಸಾದ್, ಕೆ.ಅಶೋಕ, ಬೀರನಾಯ್ಕ, ಚನ್ನಬಸಪ್ಪ, ಶೈಲಜಾ, ಹೇಮಾ ಇತರರಿದ್ದರು.