ಯಲಬುರ್ಗಾ ತಾಲೂಕಿನ ಜಿ.ವೀರಾಪೂರು ಗ್ರಾಮದಲ್ಲಿ ಶ್ರೀದೇವಿ ಪುರಾಣ ಪ್ರವಚನ ಮುಕ್ತಾಯ ಸಮಾರಂಭ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಬಸವಲಿಂಗೇಶ್ವರ ಸ್ವಾಮೀಜಿ, ಶಂಭುಲಿಂಗಯ್ಯಜ್ಜ ಹಿರೇಮಠ, ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಇತರರು ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಶಿಕ್ಷಣ- ಸಂಸ್ಕಾರ ನೀಡಿ

ಯಲಬುರ್ಗಾ: ದೇವಿ ಪುರಾಣ ಆಲಿಸುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಿ.ವೀರಾಪೂರು ಗ್ರಾಮದಲ್ಲಿ ಶನಿವಾರ ಶ್ರೀದುರ್ಗಾದೇವಿ ಜಾತ್ರೆ ಹಾಗೂ 32ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಮುಕ್ತಾಯ ಸಮಾರಂಭ, ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿ.ವೀರಾಪೂರು ಭಕ್ತಿ ಧಾರ್ಮಿಕತೆಗೆ ಮಾದರಿಯಾಗಿದೆ. ಕಳೆದ 32 ವರ್ಷಗಳಿಂದ ಶ್ರೀದುರ್ಗಾದೇವಿಯ ಪುರಾಣ ಪ್ರವಚನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ವಿದ್ಯೆ ಜತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು. ಉತ್ತಮ ಪ್ರಜೆಗಳಾಗಿ ನಿರ್ಮಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಕುದರಿಮೋತಿಯ ಮೈಸೂರಮಠದ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಶ್ರೀ ದೇವಿ ಪುರಾಣ ಕೇಳುವುದರಿಂದ ಜೀವನದಲ್ಲಿ ಸದ್ಗುಣಗಳು ವೃದ್ಧಿಸಲಿವೆ.ದುಶ್ಚಟಗಳನ್ನು ದೂರವಿಟ್ಟು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ್, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿಎಂ ಈಶ್ವರ ಆಟಮಾಳಗಿ ಹನುಮಂತಪ್ಪ ಹನುಮಾಪುರು, ಕೆ.ಟಿ.ಬೇಟಗೇರ, ಚಂದ್ರಶೇಖರ ಹಿರೇಮನಿ ಮಾತನಾಡಿದರು.

ದುರ್ಗಾದೇವಿ ಸಮಿತಿಯ ಅಧ್ಯಕ್ಷ ಕುಮಾರ ಸಾಹುಕಾರ್, ಗಣ್ಯರಾದ ಶಂಕರಗೌಡ ಪೋ.ಪಾಟೀಲ, ಎಚ್.ಎಚ್.ಕುರಿ, ಬಾಳಪ್ಪ ಬಂಡ್ಲಿ, ಶಿವು ರಾಜೂರು, ಸೀನಪ್ಪ ನಾಯಕ, ರುದ್ರಪ್ಪ ನಡುಲಮನಿ, ರಮೇಶ ಕುರಿ, ಸುಭಾಷ್ಚಂದ್ರ ಕೊಂಗಿ, ಈಶಪ್ಪ ಓಲಿ, ಭೀಮಣ್ಣ ಜರಕುಂಟಿ, ಮಂಗಳೇಶ ಶ್ಯಾಗೋಟಿ, ಶ್ಯಾಮಣ್ಣ ಪತ್ತಾರ ಇತರರಿದ್ದರು.