ಜಿಲ್ಲೆ

ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿಯಾಗಿ ಓರ್ವ ಸಾವು

ಬ್ಯಾಡಗಿ: ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕೊಲ್ಲಾಪುರ ಕ್ರಾಸ್​ ಬಳಿ ಗುರುವಾರ ನಡೆದಿದೆ.

ತಾಲೂಕಿನ ಆಣೂರ ಗ್ರಾಮದ ನಾಗರಾಜ ಬಸವಣ್ಣೆಪ್ಪ ಗಾಣಿಗೇರ ಮೃತ ಬೈಕ್​ ಸವಾರ.

ಇವರು ಬೈಕ್​ ಮೇಲೆ ಬರುತ್ತಿದ್ದ ಸಮಯದಲ್ಲಿ ಎದುರಿಗೆ ಬಂದ ಮತ್ತೊಂದು ಬೈಕ್​ ಡಿಕ್ಕಿ ಹೊಡೆದಿದೆ. ಇದರಿಂದ ನಾಗರಾಜ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.