ಕೊಟ್ಟೂರು ತಾಲೂಕು ಕೆ.ಅಯ್ಯನಹಳ್ಳಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ತಾಪಂ ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಹೇಮಾಕ್ಷಿ ರೇಣುಕಪ್ಪ, ಸದಸ್ಯರಾದ ಕೆ.ಕೊಟ್ರೇಶ, ಸಿದ್ದಲಿಂಗಸ್ವಾಮಿ, ಪಿಡಿಒ ರಾಘವೇಂದ್ರ ಅಣಜಿ, ಐಇಸಿ ಸಂಯೋಜಕ ಪ್ರಭುಕುಮಾರ್ ಇದ್ದರು.ಹೂವಿನಹಡಗಲಿ ತಾಲೂಕಿನ ಸೋವೆನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ದುಡಿಯೋಣ ಬಾ ಅಭಿಯಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ತಾಪಂ ಇಒ ಉಮೇಶ ಮೈನಹಳ್ಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪಾಲಾಕ್ಷಿ ಬಾಯಿ, ನರೇಗಾ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ, ಪಿಡಿಒ ಪ್ರಕಾಶ ಪೂಜಾರ್ ಇತರರಿದ್ದರು. 
ಜಿಲ್ಲೆ

ವಲಸೆ ತಪ್ಪಿಸಲು ನರೇಗಾದಡಿ ಕೆಲಸ

ರುದ್ರಪ್ಪ ವಾಲಿ

ಕೊಟ್ಟೂರು: ನರೇಗಾ ಯೋಜನೆಯಡಿ ಗ್ರಾಮೀಣ ಕೂಲಿಕಾರರ ಕುಟುಂಬಗಳಿಗೆ ವಾರ್ಷಿಕ 100 ದಿನ ನಿರಂತರ ಕೆಲಸ ಒದಗಿಸುವ ಮೂಲಕ ವಲಸೆ ಪ್ರವೃತ್ತಿಯನ್ನು ತಗ್ಗಿಸಲಾಗುವುದು ಎಂದು ತಾಪಂ ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಹೇಳಿದರು.

ಕೆ.ಅಯ್ಯನಹಳ್ಳಿ ಗ್ರಾಪಂ ಆಶ್ರಯದಲ್ಲಿ ಸೋಮವಾರ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ಸೇರ್ಪಡೆಯಾಗದ ಕುಟುಂಬಗಳನ್ನು ಗುರುತಿಸಿ ಅವರನ್ನು ನೋದಾಯಿಸಿ ನಿರಂತರವಾಗಿ ಕೆಲಸ ಒದಗಿಸಿ ಗ್ರಾಮೀಣ ಭಾಗದಲ್ಲಿ ವಲಸೆ ಹೋಗುವುದನ್ನು ತಪ್ಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ದುರ್ಬಲ ವರ್ಗದ ಕುಟುಂಬಗಳ ಅಂಗವಿಕಲರು, ಮಹಿಳಾ ಪ್ರಾಧಾನ್ಯ ಕುಟುಂಬಗಳು, ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವಂತೆ ಮಾಡಲು ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಎಚ್.ವಿಜಯಕುಮಾರ್ ತಿಳಿಸಿದರು.

ಆರೋಗ್ಯ ಇಲಾಖೆ ಸಹಕಾರದೊಂದಿಗೆ ನರೇಗಾ ಯೋಜನೆಯ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಿ ರೇಣುಕಪ್ಪ ಇತರರಿದ್ದರು.