ಗೋಕಾಕದ ಜ್ಞಾನದೀಪ ಪದವಿಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಗಜಾನನ ಮನ್ನಿಕೇರಿ ಅವರನ್ನು ಸತ್ಕರಿಸಲಾಯಿತು. ವಿ.ಎ.ಕಡಕೋಳ, ಪ್ರೊ.ಜೆ.ಎಂ.ಪಾಟೀಲ, ಪ್ರೊ.ಆರ್.ಎಂ.ಮಹೀಂದ್ರಕರ ಇತರರಿದ್ದರು. 
ಜಿಲ್ಲೆ

ಸಾಧನೆಗೆ ಸತತ ಪ್ರಯತ್ನ ಮುಖ್ಯ

ಪ್ರಶಾಂತ ಹೂಗಾರ

ಗೋಕಾಕ: ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಪರ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು.

ಇತ್ತೀಚೆಗೆ ನಗರದ ಜ್ಞಾನದೀಪ ಪದವಿಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸದೃಢ ದೇಶ ಕಟ್ಟುವ ಗುರುತರವಾದ ಜವಾಬ್ದಾರಿ ಯುವಕರ ಮೇಲಿದೆ. ಸಾಧನೆಗೆ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಮುಖ್ಯ ಎಂದ ಅವರು, ನಾನು ಓದಿದ ಸಂಸ್ಥೆಯ ಗುರುಗಳಿಂದ ಸನ್ಮಾನಿಸಲ್ಪಡುತ್ತಿರುವುದು ನನ್ನ ಪುಣ್ಯ ಎಂದರು.

ಸಂಸ್ಥೆಯ ಆಡಳಿತ ಮಂಡಳಿ ಚೇರ್ಮನ್ ವಿ.ಎ.ಕಡಕೋಳ, ಪ್ರಾಧ್ಯಾಪಕರಾದ ಪ್ರೊ.ಜೆ.ಎಂ.ಪಾಟೀಲ, ಪ್ರೊ.ಆರ್.ಎಂ.ಮಹೀಂದ್ರಕರ, ಪ್ರೊ.ಜಿ.ವಿ.ಮಳಗಿ, ಪ್ರಾಚಾರ್ಯ ಪ್ರೊ.ಆರ್.ಜಿ.ಭರಭರಿ, ಪ್ರೊ.ಎ.ಎಂ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಮೇಘಾ ಇತರರಿದ್ದರು.