ಜಿಲ್ಲೆ

ಒಳ ಮೀಸಲಾತಿ ಜಾರಿ ಮಾಡದಿದ್ದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ

ಎ. ಆರ್. ರಘುರಾಮ

ತಿ.ನರಸೀಪುರ : ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡದೇ ಸರ್ಕಾರ ಬಡ್ತಿ ನೇಮಕಕ್ಕೆ ಮುಂದಾದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾದಿಗ ಹೋರಾಟ ಸಮಿತಿ ಪಾದಯಾತ್ರೆ ಹಾಗು ಕ್ರಾಂತಿಕಾರಿ ರಥಯಾತ್ರೆ ಸಂಚಾಲಕ ಭಾಸ್ಕರ ಪ್ರಸಾದ್ ಎಚ್ಚರಿಕೆ ನೀಡಿದರು.

ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಸೋಮವಾರ ಸಂಜೆ ರಥಯಾತ್ರೆ ಆಗಮಿಸಿದ ಸಂದರ್ಭ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರುಕೆನೆ ಪದರು ನೀತಿ ಜಾರಿಯಾಗುವ ಮೊದಲೇ ಬಡ್ತಿ ಮೀಸಲು ತುಂಬಲು ಮುಂದಾಗಿದ್ದಾರೆ. ಅವರಧೋರಣೆಗೆ ಧಿಕ್ಕಾರ ಎಂದರು.

ವಕೀಲ ಅರುಣ್ ಕುಮಾರ ಮಾತನಾಡಿದರು. ಗಡಿನಾಡು ಚಾಮರಾಜನಗರ ಜಿಲ್ಲೆಯ ಪ್ರವಾಸ ಮುಗಿಸಿ, ಮೂಗೂರು ಗ್ರಾಮದಿಂದ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಯನ್ನು ಸಮಾಜದ ಮುಖಂಡರು ವಿದ್ಯೋದಯ ಕಾಲೇಜು ವೃತ್ತದಲ್ಲಿ ಬರ ಮಾಡಿಕೊಂಡರು.ನಂತರ ರಥವು ಬನ್ನೂರು ಕಡೆಗೆ ಪ್ರಯಾಣ ಬೆಳೆಸಿತು. ಮುಖಂಡರಾದ ಡಾ.ಮರಡೀಪುರ ರವಿಕುಮಾರ, ಅರಕಲವಾಡಿ ನಾಗೇಂದ್ರ, ಬೂದಿತಿಟ್ಟು ರಾಜೇಂದ್ರ , ಡಾ.ದುಂಡಯ್ಯ ಎಲ್ಲೆಮಾಳ ವಕೀಲ ಪ್ರಕಾಶ, ಮಂಜುನಾಥ, ಮೂಗೂರು ಸಿದ್ದರಾಜು, ಪುಟ್ಟಯ್ಯ, ಬಾಲು, ನಾಗರಾಜು, ಡಿ.ಶಂಕರ್ ಇತರರು ಇದ್ದರು.