ಜಿಲ್ಲೆ

ತಿ.ನರಸೀಪುರ - ಮೇಲುಗೈ ಸಾಧಿಸಿದ ಮಲ್ಲಣ್ಣ ಬಣ

ಎ. ಆರ್. ರಘುರಾಮ

 ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ತಿ.ನರಸೀಪುರ : ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ ಬಣ ಮೇಲುಗೈ ಸಾಧಿಸಿದೆ. 11 ನಿರ್ದೇಶಕ ಸ್ಥಾನಗಳೂ ಅವರ ಬೆಂಬಲಿಗರ ಪಾಲಾಗಿವೆ. ಪ್ರತಿಸ್ಪರ್ಧಿ ತಂಡದ ತಿರುಮಕೂಡಲು ಸ್ವಾಮಿನಾಥನ್ ಬಣದ ಬಸವರಾಜು ಮಾತ್ರ ವಿಜೇತರಾಗಿದರು. ಸ್ವತಃ ಸ್ವಾಮಿನಾಥ್ ಸೋಲು ಕಂಡಿರುವುದು ಮುಖಭಂಗವಾದಂತಾಗಿದೆ.

ಒಟ್ಟು 12 ಸದಸ್ಯರ ಪೈಕಿ ತಿರುಮಕೂಡಲು ನಾಗಮ್ಮ, ನಾಗರತ್ನ ಹಾಗೂ ಪ್ರಕಾಶ್ ಅವಿರೋಧ ಆಯ್ಕೆಯಾಗಿದ್ದರು. ಉಳಿದ 9 ನಿರ್ದೇಶಕರ ಆಯ್ಕೆಗಾಗಿಚುನಾವಣೆ ನಡೆಯಿತು. 642 ಮತದಾರರ ಪೈಕಿ 609 ಜನ ಮತ ಚಲಾಯಿಸಿದರು. 65 ಮತ ತಿರಸ್ಕೃತಗೊಂಡವು. 8 ಜನ ಮಲ್ಲಣ್ಣ ಬಣದವರು ವಿಜಯದ ನಗೆ ಬೀರಿದರು.

ಭಾನುವಾರ ರಾತ್ರಿ 9.30ಕ್ಕೆ ಎಣಿಕೆ ಮುಕ್ತಾಯವಾಗಿ ಅಂತಿಮ ಫಲಿತಾಂಶ ಪ್ರಕಟಿಸಲಾಯಿತು.

ಮಲ್ಲಣ್ಣ ಅತಿ ಹೆಚ್ಚು ( 461) ಮತ ಪಡೆದು ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಟಿ.ಸಿ.ಫಣೀಶ ಕುಮಾರ್,

ಎಂ.ಮಹದೇವಯ್ಯ, ಮಹದೇವಸ್ವಾಮಿ, ಮಹಾಲಿಂಗಪ್ಪ, ಬಿ.ರಾಘವೇಂದ್ರ, ಶೇಖರ

, ಬಿ.ಸುಂದರಸ್ವಾಮಿ ಮತ್ತು ಬಸವರಾಜು ವಿಜೇತರು. ಚುನಾವಣಾಧಿಕಾರಿ ಜೆ.ರಮೇಶ್ ಪ್ರಕ್ರಿಯೆ ನಡೆಸಿಕೊಟ್ಟರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.