ಜಿಲ್ಲೆ

ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಿ-ಸಂಸದ ಸುನೀಲ್ ಬೋಸ್

ಎ. ಆರ್. ರಘುರಾಮ

 ತಿ.ನರಸೀಪುರ : ಒಳ ಮೀಸಲಾತಿ ಹೋರಾಟ ಸಮಿತಿಯ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಸಚಿವ ಡಾ. ಮಹದೇವಪ್ಪ ಅವರ ವಿರುದ್ಧ ಅಸಭ್ಯ ಪದ ಬಳಸುತ್ತಿರುವ ಮುಖಂಡ ಭಾಸ್ಕರ ಪ್ರಸಾದ್ ಅವರು ತಮ್ಮ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಹಳೆ ಸಂತೇಮಾಳದ ಬಳಿ ಮಂಗಳವಾರ ಕಾರ್ಯಕರ್ತರು ಹಾಗೂ ಮುಖಂಡರ ಅಹವಾಲು ಆಲಿಸಿದ ಬಳಿಕ ಮಾತನಾಡಿದರು. ಹೋರಾಟಗಾರರಿಗೆ ಭಾಷೆ ಮತ್ತು ಪದ ಬಳಕೆ ಎಚ್ಚರ ಇರಬೇಕು ಎಂದು ಎಚ್ಚರಿಸಿದರು.

ಉಪಾಧ್ಯಕ್ಷರ ರಾಜೀನಾಮೆಗೆ ತಾಕೀತು

ಆಂತರಿಕ ಒಪ್ಪಂದದಂತೆ ಅವಧಿ ಮುಗಿದರೂ ಸ್ಥಾನದಲ್ಲಿ ಮುಂದುವರಿದಿರುವ ಪುರಸಭೆಯ ಉಪಾಧ್ಯಕ್ಷೆ ಎಂ.ರಾಜೇಶ್ವರಿ ಅವರ ರಾಜೀನಾಮೆಯನ್ನು ಕೊಡಿಸುವಂತೆ ಸ್ಥಳದಲ್ಲಿಯೇ ಇದ್ದ ಆಪ್ತ ಸಹಾಯಕ ಹಾಗೂ ರಾಜೇಶ್ವರಿ ಅವರ ಪತಿ ರಾಘವೇಂದ್ರ ಅವರಿಗೆ ಸಂಸದ ಸುನೀಲ್ ಬೋಸ್ ಸೂಚಿಸಿದರು. ಬುಧವಾರ ಬೆಳಗ್ಗೆ ರಾಜೀನಾಮೆ ಪ್ರಕ್ರಿಯೆ ನಡೆಸಬೇಕು ಎಂದು ತಾಕೀತು ಮಾಡಿದರು.ಎಂ. ಪರಶಿವಮೂರ್ತಿ, ಬಿ. ಬಸವರಾಜ್, ಶ್ರೀಕಂಠ, ಕುಕ್ಕೂರು ಗಣೇಶ್ ಇತರರು ಇದ್ದರು.