ಜಿಲ್ಲೆ

ಮಾಜಿ ಸಚಿವ ರಾಚಯ್ಯ ಜನ್ಮದಿನ ಇಂದು

ಎ. ಆರ್. ರಘುರಾಮ

ತಿ.ನರಸೀಪುರ : ಕಾಂಗ್ರೆಸ್ ವೈದ್ಯರ ವಿಭಾಗವು ಮೇ 8ರಂದು ಪಟ್ಟಣದಲ್ಲಿ ಮಾಜಿ ಸಚಿವ ಎನ್. ರಾಚಯ್ಯ ಅವರ ಜನ್ಮದಿನಾಚರಣೆ ಹಮ್ಮಿಕೊಂಡಿದೆ. ಗೋಪಾಲಪುರ ಗ್ರಾಮದ ರಾಚಯ್ಯ ಅವರ ನಿವಾಸದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಚಯ್ಯ ಅವರ ಪುತ್ರ, ಮಾಜಿ ಎಂಎಲ್‌ಸಿ ಧರ್ಮಸೇನಾ ಮತ್ತು ಕುಟುಂಬದವರು ಸೇರಿದಂತೆ ಅಭಿಮಾನಿಗಳು

ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ವೈದ್ಯರ ವಿಭಾಗದ ಜಿಲ್ಲಾಧ್ಯಕ್ಷ ಡಾ.ಬಿ.ಪ್ರದೀಪ್ ತಿಳಿಸಿದ್ದಾರೆ.