ಬಿಡದಿ: ಟಿಕೆಎಂ ಕಾರ್ವಿುಕರು ಮತ್ತು ಆಡಳಿತ ಮಂಡಳಿ ನಡುವಿನ ಸಮಸ್ಯೆ ಬಗಹರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕೆಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಒತ್ತಾಯಿಸಿದರು.
ಬಿಡದಿ ಬಳಿಯ ಖಾಸಗಿ ಹೊಟೇಲ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ವಿುಕರ ಮುಷ್ಕರ 40ನೇ ದಿನದತ್ತ ಸಾಗುತ್ತಿದೆ. ಕಾರ್ವಿುಕರು ಹಾಗೂ ಅವರನ್ನು ನಂಬಿರುವ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಕಾರ್ವಿುಕರು ಮತ್ತು ಕಂಪನಿ ಆಡಳಿತ ಮಂಡಳಿಯವರನ್ನು ಬುದ್ಧಿ ಹೇಳಿ ಕೆಲಸ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.
ಆಡಳಿತ ಮಂಡಳಿ ಅಥವಾ ಕಾರ್ವಿುಕರ ಪರವಾಗಿ ನಾನಿಲ್ಲ. ಶಾಸಕನಾಗಿದ್ದಾಗಲೂ ಸಣ್ಣಪುಟ್ಟ ವಿಚಾರಕ್ಕೆ ಮುಷ್ಕರ ನಡೆದಿತ್ತು. ಕೂಲಂಕಷವಾಗಿ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗಿತ್ತು. ಈಗಲೂ ಅಂತಹ ದೊಡ್ಡ ಸಮಸ್ಯೆ ಏನು ಕಾಣುತ್ತಿಲ್ಲ. ಆಡಳಿತ ಮಂಡಳಿ ಪ್ರತಿಷ್ಠೆ ದೂರ ಮಾಡಿ ಒಂದಿಬ್ಬರು ಕಾರ್ವಿುಕರು ತಪ್ಪು ಮಾಡಿದ್ದರೆ ಅವರಿಗೆ ಬುದ್ಧಿ ಹೇಳಿ ಕಾರ್ಖಾನೆ ಕೆಲಸ ಆರಂಭಿಸಬೇಕು ಎಂದರು.
ಕಾರ್ವಿುಕರ ಸಂಘಟನೆಯ ಕೆಲವು ಸದಸ್ಯರ ಹಗೆತನದ ತೀರ್ವನದಿಂದ ಉತ್ಪಾದನಾ ಘಟಕದಲ್ಲಿ ಸುರಕ್ಷಿತ ವಾತಾವರಣ ಕಣ್ಮರೆಯಾಗಿದೆ. ಹೀಗಾಗಿ ಘಟಕ ಮುಚ್ಚದೆ ಬೇರೆ ವಿಧಿಯಿಲ್ಲ ಎಂದು ಸಂಸ್ಥೆ ತಿಳಿಸಿರುವ ಬಗ್ಗೆ ಪತ್ರಕರ್ತರು ಮಾಜಿ ಶಾಸಕರ ಗಮನಸೆಳೆದಾಗ, ಕಾರ್ವಿುಕರದ್ದು ತಪ್ಪೋ, ಆಡಳಿತ ಮಂಡಳಿ ಉದ್ಧಟತನವೋ ಬಲ್ಲವರು ಯಾರು, ನೊಂದ ಕಾರ್ವಿುಕರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳ ಖಾಲಿ ಮಾಡಿಸಲಾಗಿದೆ. ಪೊಲೀಸರು ಪೆಂಡಾಲ್ ತೆರವುಗೊಳಿಸಿದ್ದಾರೆ. ಒಬ್ಬ ಕಾರ್ವಿುಕನೊಬ್ಬನಿಗೆ ಎಂದರೆ ಆತನ ಬೆಂಬಲಕ್ಕೆ ಇತರ ಕಾರ್ವಿುಕರು ನಿಲ್ಲುವುದು ಸಹಜ. ಸ್ಥಳೀಯ ಜನಪ್ರತಿನಿಧಿಗಳು ಮೌನ ವಹಿಸಿರುವುದು ತರವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ನಟರಾಜು, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯು.ನರಸಿಂಹಯ್ಯ, ಬಾನಂದೂರು ಪಾಪಣ್ಣ ಮತ್ತಿತರರು ಇದ್ದರು.