ಜಿಲ್ಲೆ

ಹಕ್ಕುಪತ್ರ ವಿತರಿಸಲು ಒತ್ತಾಯ

ಪ್ರಶಾಂತ ಹೂಗಾರ

ಕಾಗವಾಡ: ಪಟ್ಟಣದ ಬಸವ ನಗರದ ಎಸ್ಸಿ ಸೇರಿ ವಿವಿಧ ಸಮುದಾಯದ ಸುಮಾರು 1,200 ಕುಟುಂಬಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು. ಮನೆ ನಿರ್ಮಾಣ ಮಾಡಿಕೊಂಡವರಿಗೆ ಇ-ಸ್ವತ್ತು, ಡಿಜಿಟಲ್ ಉತಾರ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ರವೀಂದ್ರ ಹಾದಿಮನಿ ಹಾಗೂ ಪಪಂ ಮುಖ್ಯಾಧಿಕಾರಿ ಕೆ.ಕೆ. ಗಾವಡೆಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಳಿಕ ತಹಸೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಬೇಡಿಕೆ ಶೀಘ್ರ ಈಡೇರಿಸುವುದಾಗಿ ಭರವಸೆ ನೀಡಿದರು.

ದಲಿತ ಮುಖಂಡ ಸಂಜಯ ತಳವಲಕರ, ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಚಿನ ಪೂಜಾರಿ, ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಸಂಜಯ ತಳವಲಕರ, ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಅರುಣ ಜೋಶಿ, ರವಿ ಕಾಂಬಳೆ, ವಿದ್ಯಾಧರ ಧೋಂಡಾರೆ, ಜಯಪಾಲ ಬಡಿಗೇರ, ಶಂಕರ ಕಾಂಬಳೆ, ಪ್ರಕಾಶ ಕಾಂಬಳೆ, ಸಿದ್ದು ಬಾನೂಸೆ, ರಾಜು ಪವಾರ, ಉಮೇಶ ಮನೋಜ, ಜನಾರ್ಧನ ಧೋಂಡಾರೆ, ಕುಮಾರ ಬನಸೋಡೆ, ಮಹಾಂತೇಶ ಬನಸೋಡೆ ಇತರರಿದ್ದರು.