ಜಿಲ್ಲೆ

2000ಕ್ಕೂ ಹೆಚ್ಚು ಭಕ್ತರಿಂದ ತಿರುಪತಿ ಪಾದಯಾತ್ರೆ

ಗಂಗಾಧರ ಬಿ ವಿ

ಕುದೂರು

ಮಂಡ್ಯ, ನಾಗಮಂಗಲ, ಕುಣಿಗಲ್ ಹಾಗೂ ಕುದೂರು ಭಾಗದ ಸುಮಾರು 2000ಕ್ಕೂ ಹೆಚ್ಚು ಭಕ್ತರು ಬುಧವಾರ ಮುಂಜಾನೆ ತಿರುಪತಿಗೆ ಪಾದಯಾತ್ರೆ ಆರಂಭಿಸಿರು.

ಮಕ್ಕಳು, ಹಿರಿಯರು ಹಾಗೂ ಮಹಿಳೆರು ಸೇರಿ ಸಾವಿರಾರು ಭಕ್ತರು ಚಿಕ್ಕ ಚಿಕ್ಕ ಗುಂಪುಗಳಲ್ಲಿ ಗೋವಿಂದ ನಾಮಸ್ಮರಣೆ ಮಾಡುತ್ತ ಹೆಜ್ಜೆಹಾಕಿದರು. ನಿತ್ಯ ಸುಮಾರು 45 ಕಿ.ಮೀ ಸಾಗಿ 9ನೇ ದಿನಕ್ಕೆ ತಿರುಪತಿ ತಲುಪಲಿದ್ದಾರೆ. ಕುಣಿಗಲ್ನ ತಿರುಮಲ ತಿರುಪತಿ ಪಾದಯಾತ್ರೆ ಸಮಿತಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾದಯಾತ್ರೆ ಸಮಿತಿ ಬಲರಾಮ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಮಿತಿ ವತಿಯಿಂದ 18ನೇ ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಭಕ್ತರ ಸಹಕಾರ ಹಾಗೂ ಸಮಿತಿಯ ಸದಸ್ಯರ ಉತ್ಸಾಹದಿಂದ ಕಾರ್ಯಕ್ರಮ ಯಶಸ್ವಿಗೊಳ್ಳುತ್ತಿದೆ ಎಂದರು.

ಕುಣಿಗಲ್ ಮಾರ್ಗವಾಗಿ ಬಂದ ಪಾದಯಾತ್ರಿಗಳಿಗೆ ಕುದೂರಿನ ಜನತಾನಗರದ ಅಂತರಗಂಗೆ ಸರ್ಕಲ್ನಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಜತೆಗೆ ಪಟ್ಟಣದ ಹಲವು ಕಡೆ ಕುದೂರು ನಾಗರಿಕರು ಕಾಫಿ, ಟೀ, ಬಿಸ್ಕೆಟ್, ತಂಪು ನೀರು, ಬೆಳಗಿನ ತಿಂಡಿ ವ್ಯವಸ್ಥೆ ಕಲ್ಪಿಸಿದರು.