ಬ್ಯಾಡಗಿ: ಸಾಲಬಾಧೆಗೆ ಬೇಸತ್ತ ರೈತನೊಬ್ಬ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ.
ನಾಗೇಶಪ್ಪ ಚನ್ನಬಸಪ್ಪ ಕೋಡಿಗದ್ದಿ (50) ಆತ್ಮಹತ್ಯೆ ಮಾಡಿಕೊಂಡ ರೈತ.
2 ಎಕರೆ .14 ಗುಂಟೆ ಜಮೀನು ಹೊಂದಿದ್ದು, ಶಿಡೇನೂರು ಕೆನರಾ ಬ್ಯಾಂಕ್ನಲ್ಲಿ 4 ಲಕ್ಷ ರೂ. ಸಾಲ ಮಾಡಿಕೊಂಡು ತಿಂಗಳ ಹಿಂದೆ ಒಟಿಎಸ್ ಮೂಲಕ ಪಾವತಿಸಿದ್ದರು.
ಆದರೆ ಪುನ: ಬೀಜ ಬಿತ್ತನೆ ಕೃಷಿ ಚಟುವಟಿಕೆಗೆ ಬ್ಯಾಡಗಿ ಕೆನರಾ ಬ್ಯಾಂಕ್ನಲ್ಲಿ ಚಿನ್ನ ಒತ್ತೆಯಿಟ್ಟು 3.80 ಲಕ್ಷ ರೂ. ಸಾಲ ಪಡೆದಿದ್ದಾರೆ.
20 ದಿನಗಳಿಂದ ಮಳೆ ಕೈಕೊಟ್ಟ ಪರಿಣಾಮ ಅದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಶನಿವಾರ ಬೆಳಗ್ಗೆ ದನದ ದೊಡ್ಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.