ಜಿಲ್ಲೆ

ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ

ತುಮಕೂರು: ಪತ್ನಿ ಕಿರುಕುಳ ಹಿನ್ನೆಲೆಯಲ್ಲಿ ವಿಡಿಯೋ ಮಾಡುತ್ತಲೇ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ರಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮರಳೂರು ದಿಣ್ಣೆ ನಿವಾಸಿ ಸಲ್ಮಾನ್​ ಪಾಷಾ ಆತ್ಮಹತ್ಯೆಗೆ ಯತ್ನಿಸಿದವ. 4 ವರ್ಷದ ಹಿಂದೆ ಸೈಯದ್​ ನಿಕತ್​ ಫಿದೋರ್ಸ್​ ಎಂಬಾಕೆ ಜತೆ ವಿವಾಹವಾಗಿದ್ದು, 2 ವರ್ಷ ಒಟ್ಟಿಗಿದ್ದ ದಂಪತಿ ನಡುವೆ ಬಿರುಕು ಮೂಡಿ, ಫಿದೋರ್ಸ್​ ತಾಯಿ ಮನೆ ಸೇರಿದ್ದರು.

ಫಿಧೋರ್ಸ್​ ಎರಡನೇ ಮಗುವಿನ ಗರ್ಭಿಣಿಯಾದ ಸಂದರ್ಭದಲ್ಲಿ ಕುವೈತ್​ಗೆ ತೆರಳಿದ್ದ ಸಲ್ಮಾನ್​ ಪಾಷಾ ಅಲ್ಲಿ ಹೈಡ್ರಾಲಿಕ್​ ಮೆಕಾನಿಕ್​ ಆಗಿದ್ದ. ಈ ವೇಳೆ ತಾಯಿ ಮನೆಗೆ ತೆರಳಿದ್ದ ಫಿಧೋರ್ಸ್​ ಪತಿ ಜತೆ ವೈಮನಸ್ಸು ಮೂಡಿದ್ದು, ದಿನ ಕಳೆದಂತೆ ಜಗಳ ಆರಂಭಿಸಿದ್ದಾರೆ. ಸಲ್ಮಾನ್​ಗೆ ಹಣ ನೀಡುವಂತೆ ಪತ್ನಿ, ಆಕೆ ಕುಟುಂಬ ಹಾಗೂ ಸಂಬಂಧಿ ಸೈಯದ್​ ಬುರ್ಹಾನ್​ ಉದ್ದೀನ್​ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಸಲ್ಮಾನ್​ ಕುವೈತ್​ನಿಂದ ಮರಳಿದ ಬಳಿಕ ಇಬ್ಬರು ಮಕ್ಕಳನ್ನು ತೋರಿಸದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಹಣ ಕೊಡದಿದ್ದರೆ ವಿಚ್ಛೇದನ ನೀಡುವುದಾಗಿ ಹೆದರಿಸಿದ್ದು, ಮಕ್ಕಳನ್ನು ಕೊಡದೇ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಭಾನುವಾರ ವಿಷ ಕುಡಿಯುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಲ್ಮಾನ್​ ಕುಟುಂಬಸ್ಥರು ಜಿಲ್ಲಾ ಪೊಲೀಸ್​ ಕಚೇರಿಗೆ ಈ ಬಗ್ಗೆ ದೂರು ನೀಡಿದ್ದಾರೆ.