ಜಿಲ್ಲೆ

ಪತಿ, ಅತ್ತೆ, ಮಾವ, ನಾದಿನಿ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

ನವಲಗುಂದ: ಮಹಿಳೆಯೊಬ್ಬರು ಪತಿ, ಅತ್ತೆ, ಮಾವ ಹಾಗೂ ನಾದಿನಿಯ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪಟ್ಟಣದ ಜಮಖಾನ್ ಓಣಿಯ ನಿವಾಸಿ ನಿಖಿತಬಾನು ರಿಯಾಜ್​ಅಹ್ಮದ್ ಭಾಗವಾನ ನೇಣಿಗೆ ಶರಣಾದವರು.

ಅತ್ತೆ ಜರಿನಾಬೇಗಂ, ನಾದಿನಿ ರುಕ್ಸನಾ ದೊಡ್ಡಮನಿ, ಮಾವ ಇಮಾಮ್ಾಬ ಭಾಗವಾನ, ಪತಿ ರಿಯಾಜ ಅಹ್ಮದ ಭಾಗವಾನ ಎಂಬುವವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಾವಲಸಾಬ ಸೈದುಸಾಬ ಭಾಗವಾನ ಎಂಬುವರು ಲಿಖತ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್​ಐ ಜನಾರ್ದನ ಭಟ್ರಲಿ ತನಿಖೆ ಕೈಕೊಂಡಿದ್ದಾರೆ.