ಹೊನ್ನಾವರ: ಆಕಸ್ಮಿಕ ಬೆಂಕಿ ತಗುಲಿ ಟಯರ್ ಅಂಗಡಿಯೊಂದು ಸಂಪೂರ್ಣ ಸುಟ್ಟಿರುವ ಘಟನೆ ಪಟ್ಟಣದ ಕರ್ನಲ್ ಕಂಬದ ರಸ್ತೆ ಸಮೀಪ ಶನಿವಾರ ತಡರಾತ್ರಿ ನಡೆದಿದೆ.
ಪ್ರಕಾಶ ಗೌಡ ಎಂಬುವವರ ಮಳಿಗೆ ಸುಟ್ಟಿರುವುದು. ಬೆಂಕಿಯ ಕೆನ್ನಾಲಿಗೆಗೆ ಹತ್ತಿರದ ಮನೆಗಳಿಗೆ ಬೆಂಕಿ ತಗಲುವ ಆತಂಕ ಇಲ್ಲಿನ ನಿವಾಸಿಗಳಿಗೆ ಉಂಟಾಗಿತ್ತು.
ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಹೊನ್ನಾವರದ ಪೊಲೀಸರು ಸ್ಥಳದಲ್ಲಿ ತುರ್ತು ಕಾರ್ಯಾಚರಣೆ ಜತೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರು. ಅಂಗಡಿ ಸಂಪೂರ್ಣ ಅಗ್ನಿ ಅವಘಡಕ್ಕೆ ತುತ್ತಾಗಿದೆ.