ಜಿಲ್ಲೆ

ಶಾಸಕರಿಗೆ ತಿರಂಗಾ ಹಸ್ತಾಂತರ

Dharwada - Basavaraj Idli

ಹುಬ್ಬಳ್ಳಿ: ಪ್ರಧಾನಮಂತ್ರಿ ಕರೆಯ ಮೇರೆಗೆ "ಹರ್ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರು ಕಳುಹಿಸಿದ ಹರ್ ಘರ್ ತಿರಂಗಾ ಪತ್ರ ಹಾಗೂ ರಾಷ್ಟ್ರಧ್ವಜವನ್ನು ಅಂಚೆ ಇಲಾಖೆ ಅಧಿಕಾರಿಗಳು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ನಾವೆಲ್ಲರೂ ಸೇರಿ ಅಭಿಯಾನವನ್ನು ಯಶಸ್ವಿಗೊಳಿಸಲು ಸಂಕಲ್ಪ ಮಾಡೋಣ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಿ ರಾಷ್ಟ್ರಧ್ವಜದ ಜೊತೆ ನಿಮ್ಮ ಸೆಲ್ಫಿ ಕ್ಲಿಕ್ ಮಾಡಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಬಿ.ಎಲ್. ರವೀಂದ್ರ, ಮಾರುಕಟ್ಟೆ ವ್ಯವಸ್ಥಾಪಕ ಮಂಜುನಾಥ ಮಹೇಂದ್ರಕರ ಉಪಸ್ಥಿತರಿದ್ದರು.