ಆನವೇರಿಯ ಮತ್ತಿಹಳ್ಳದಲ್ಲಿ ಬಿದ್ದು ಜಖಂಗೊಂಡ ಟಿಪ್ಪರ್. 
ಜಿಲ್ಲೆ

ಸೇತುವೆಯಿಂದ ಹಳ್ಳಕ್ಕೆ ಟಿಪ್ಪರ್ ಪಲ್ಟಿ

Shivamogga - Desk - Praveena Kumar S

ಹೊಳೆಹೊನ್ನೂರು: ಸಮಿಪದ ಆನವೇರಿಯ ಮತ್ತಿಹಳ್ಳದಲ್ಲಿ ಟಿಪ್ಪರ್ ಹಳ್ಳಕ್ಕೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಪ್ರಣಾಪಾಯದಿಂದ ಪಾರಾಗಿದ್ದಾನೆ.
ಶನಿವಾರ ರಾತ್ರಿ ಆನವೇರಿಯ ಕೆ.ಕೆ. ರಸ್ತೆಯ ಮತ್ತಿಹಳ್ಳದ ತಿರುವಿನಲ್ಲಿರುವ ಸೇತುವೆ ಮೇಲೆ ಎದುರಿನಿಂದ ಬಂದ ಬೈಕ್‌ಗೆ ದಾರಿ ನೀಡಲು ಮುಂದಾದ ಟಿಪ್ಪರ್ ಚಾಲಕ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಗುದ್ದಿ ಹಳ್ಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಟಿಪ್ಪರ್‌ನ ನಾಲ್ಕೂ ಚಕ್ರಗಳು ಕಿತ್ತು ಬಂದಿವೆ. ಅಪಘಾತವಾದ ಟಿಪ್ಪರ್ ಈ ಭಾಗದ ಅಕ್ರಮ ಮರಳು ತುಂಬಿದ ಲೋಡ್‌ಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಹಳ್ಳದಲ್ಲಿ ಎರಡು ಕ್ರೇನ್‌ಗಳನ್ನು ಇಳಿಸಿ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿ ಟಿಪ್ಪರ್ ಮೇಲೆತ್ತಲಾಗಿದೆ.
ಸಂಜೆ ಕತ್ತಲಾಗುತ್ತಿದ್ದಂತೆ ಈ ಭಾಗದಲ್ಲಿ ಮರಳು ತುಂಬಿದ ಲಾರಿಗಳು ಅತಿ ವೇಗದಲ್ಲಿ ಓಡಾಡುತ್ತವೆ. ಹಿಂಬದಿಯ ಸವಾರರಿಗೆ ದಾರಿ ನೀಡದಂತೆ ಯದ್ವಾತದ್ವ ವಾಹನ ಚಲಾಯಿಸುತ್ತಾರೆ. ಕಳೆದ ತಿಂಗಳು ಮರಳು ತುಂಬಿದ ಲಾರಿ ಅಪಘಾತವಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದ.