ಜಿಲ್ಲೆ

ಟಿಪ್ಪರ್​&ಲಾರಿ ಮಧ್ಯೆ ಡಿಕ್ಕಿ-, ಲಾರಿ ಚಾಲಕ ಸಾವು

ಬಂಗಾರಪೇಟೆ: ಪಟ್ಟಣದಿಂದ ಟೇಕಲ್​ ಮಾರ್ಗದಲ್ಲಿ ಶುಕ್ರವಾರ ಟಿಪ್ಪರ್​ ಮತ್ತು ಲಾರಿ ಮಧ್ಯೆ ಅಪಘಾತವಾಗಿ ಲಾರಿ ಚಾಲಕ ಮೃತಪಟ್ಟಿದ್ದು, ಟಿಪ್ಪರ್​ ಚಾಲಕನಿಗೂ ಗಾಯಗಳಾಗಿವೆ. ಕಣಿಂಬೆಲೆ ಗ್ರಾಮದ ನಿವಾದಿ ಹನುಮಂತಪ್ಪ (60) ಮೃತ. ಬಂಗಾರಪೇಟೆಯಿಂದ ಟೇಕಲ್​ ಮಾರ್ಗ ಹೋಗುತ್ತಿದ್ದ ಲಾರಿಗೆ ಟೇಕಲ್​ ಕಡೆಯಿಂದ ಬಂಗಾರಪೇಟೆ ಕಡೆಗೆ ಎಂ ಸ್ಯಾಂಡ್​ ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಸ್ಥಳಿಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನೆ ಸ್ಥಳಕ್ಕೆ ಕಾಮಸಮುದ್ರಂ ಪೊಲೀಸ್​ ಇನ್​ಸ್ಪೆಕ್ಟರ್​ ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬೂದಿಕೋಟೆ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಸುನೀಲ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.