TIPPANNA MADIVALA 
ಜಿಲ್ಲೆ

ಮಳೇಮಠಗೆ ಎಂಪಿ ಟಿಕೆಟ್ ನೀಡಿ

TIPPANNA MADIVALA MP TICKET MALEMATH

Kopala - Raveendra V K

ಕೊಪ್ಪಳ: ಕೆಪಿಸಿಸಿ ಸಿಂಡಿಕೇಟ್ ಸದಸ್ಯ ಬಸವರಾಜ ಸ್ವಾಮಿ ಮಳೇಮಠ 30 ವರ್ಷದಿಂದ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಿಂಗಾಯತ ಸಮುದಾಯ ನಾಯಕನಾಗಿದ್ದು, ಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡ ತಿಪ್ಪಣ್ಣ ಮಡಿವಾಳ ಒತ್ತಾಯಿಸಿದರು.

ಆರು ವಿಧಾನಸಭಾ ಚುನಾವಣೆ, 5 ಲೋಕಸಭಾ ಚುನಾವಣೆಗಳಲ್ಲಿ ಮಳೇಮಠ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ. ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಶಿಕ್ಷಣವಂತರಾಗಿದ್ದು, ಕಾನೂನು ಪದವಿ ಪಡೆದಿದ್ದಾರೆ. ಎಲ್ಲ ವರ್ಗದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷ ಅವರ ಸೇವೆ ಪರಿಗಣಿಸಿ ಲೋಕಸಭೆ ಟಿಕೆಟ್ ನೀಡಬೇಕು. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಪಕ್ಷದ ಹೈ ಕಮಾಂಡ್‌ಗೆ ಒತ್ತಾಯಿಸಬೇಕು.

ನಾವು ಈಗಾಗಲೇ ಅವರ ಪರವಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದ್ದು, ಸಾವಿರಾರು ಜನ ಟಿಕೆಟ್ ನೀಡುವಂತೆ ಸಹಿ ಮಾಡಿದ್ದಾರೆ. ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮೌಖಿಕವಾಗಿ ಮನವಿ ಸಲ್ಲಿಸಿದ್ದು, ಮುಂದೆ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭೋವಿ, ನಿಂಗಪ್ಪ ನಾಯಕ, ಆಶಾಸಾಬ ಮರಕುಂಬಿ, ನಾಗರಾಜ ಈಡೀಗ ಇತರರಿದ್ದರು.