ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂ.2ರಿಂದ 4ರ ತನಕ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಟಿಂಟೆಡ ಗ್ಲಾಸ್ ಅಳವಡಿಸಿ ಸಂಚರಿಸುವ ವಾಹನಗಳ ವಿರುದ್ಧ 326 ಪ್ರಕರಣ ದಾಖಲಿಸಿ, 1.63 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಹಾಗೂ ಬ್ಲ್ಯಾಕ್ ಫಿಲ್ಮಂಗಳನ್ನು ಆಳವಡಿಸುವವರ ವಿರುದ್ದ ಕ್ರಮ ಕೈಗೊಳ್ಳಲು ಮತ್ತು ಟಿಂಟೆಡ್ ಗ್ಲಾಸ್ ಗಳನ್ನು ತೆರವುಗೊಳಿಸುವಂತೆ ಆದೇಶಿಸಿದೆ. ವಾಹನಗಳ ಗಾಜುಗಳಿಗೆ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಲಾಗಿರುವ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಸ್ವತಃ ತೆಗೆದು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು.
ಸಾರ್ವಜನಿಕರು ಸಂಚರಿಸುವ ವೇಳೆ ಯಾವುದೇ ಕಾರಿನ ಗ್ಲಾಸ್ ಗಳಲ್ಲಿ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ, ಕಾರಿನ ನೊಂದಣಿ ಸಂಖ್ಯೆ, ದಿನಾಂಕ ಮತ್ತು ಸಮಯ ಹಾಗೂ ಸಾಧ್ಯವಾದಲ್ಲಿ ಪೋಟೋ ಹಾಗೂ ಸ್ಥಳದ ವಿವರಗಳ ಮಾಹಿತಿಯನ್ನು ನಗರ ಕಂಟ್ರೋಲ್ ರೂಮ್ : 9480802321, ಎಸಿಪಿ ಟ್ರಾಫಿಕ್ : 9480802312 ಮೊಬೈಲ್ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ಅಥವಾ ಮೊಬೈಲ್ ಕರೆ ಮಾಡಿ ಸಂಪರ್ಕಿಸಿ ಮಾಹಿತಿಗಳನ್ನು ನೀಡುವಂತೆ ಕೋರಲಾಗಿದೆ.