ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಗ್ರಾಮ ಪಂಚಾಯಿತಿ ಅಂಗಡಿ ಮಳಿಗೆಗಳನ್ನು ಏಲಂ ಮೂಲಕ ಪಡೆದುಕೊಂಡವರು ತಮಗೆ ಬೇಕಾದಂತೆ ಕಟ್ಟಡಗಳನ್ನು ಮಾರ್ಪಾಡು ಮಾಡಿರುವುದಲ್ಲದೆ ಕೊಠಡಿಗಳ ಸುತ್ತಮುತ್ತ ಹೆಚ್ಚುವರಿ ಕೋಣೆ ನಿರ್ಮಾಣ, ಕಬ್ಬಿಣದ ಶೀಟು ಬಳಸಿ ಕೋಣೆಗಳ ರೀತಿಯಲ್ಲಿ ನಿರ್ಮಿಸಿ ಬದಲಾವಣೆ ಮಾಡಿ ಕಾನೂನು ಹಾಗೂ ಏಲಂ ಷರತ್ತು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ.
ಹೆಬ್ರಿ ಗ್ರಾಪಂನ ಬಹುತೇಕ ವಾಣಿಜ್ಯ ಸಂಕೀರ್ಣಗಳ ಅಂಗಡಿ ಕೋಣೆಗಳನ್ನು ಏಲಂನಲ್ಲಿ ಪಡೆದವರು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡಿದ್ದು, ಸಾರ್ವಜನಿಕರಿಂದ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ. ಹೆಬ್ರಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಂಗಡಿ ಕೋಣೆ, ಕೊಠಡಿಗಳನ್ನು ಮಾರ್ಪಾಡು ಮಾಡಲಾಗಿದೆ.
ಗ್ರಾಪಂ ಸದಸ್ಯರು, ಊರವರು ಮತ್ತು ಪ್ರಮುಖರ ಒಪ್ಪಿಗೆ ಪಡೆದು 2009ರಲ್ಲಿ ಗ್ರಾಪಂಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಅಲ್ಲದೆ ಕಟ್ಟಡದ ಎದುರು ನಿರ್ಮಿಸಿರುವ ಅಂಗಡಿಮಳಿಗೆಗಳನ್ನು ಏಲಂ ಮೂಲಕ ಬಾಡಿಗೆಗೆ ನೀಡಲಾಗಿತ್ತು. ಇತ್ತೀಚೆಗೆ ಅಂಗಡಿ ಕೋಣೆಗಳ ಎದುರು ತಗಡು ಶೀಟಿನ ಚಪ್ಪರ ಹಾಕಿ ಕಟ್ಟಡದ ಅಂದವನ್ನು ಕೆಡಿಸಲಾಗಿದೆ. ಗ್ರಾಮ ಪಂಚಾಯಿತಿ ಕೂಡ ತಗಡು ಚಪ್ಪರ ನಿರ್ಮಿಸಲು ಅವಕಾಶ ನೀಡಿದ್ದು ಸರಿಯಲ್ಲ, ಗ್ರಾಮಸಭೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ತಗಡು ಚಪ್ಪರ ಸಮೇತ ಮರು ಏಲಂ ಮಾಡಲು ಗ್ರಾಪಂ ನಿರ್ಧಾರ ಮಾಡಿದೆ. ಇದು ಸರಿಯಲ್ಲ. ಏಲಂ ಷರತ್ತು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆಬ್ರಿ ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡ ಗ್ರಾಮ ಮಿನಿ ವಿಧಾನಸೌಧದ ಎದುರು ತಗಡು ಮಾಡು ರಚನೆ ಮಾಡಿ ಕಟ್ಟಡದ ಅಂದ ಕೆಡಿಸಿದ್ದನ್ನು ಆಕ್ಷೇಪಿಸಿ ಗ್ರಾಪಂ ಮಾಜಿ ಅಧ್ಯಕ್ಷ ನೀರೆ ಕೃಷ್ಣಶೆಟ್ಟಿ ಅವರು ತಾಪಂ ಇಒಗೆ ದೂರು ನೀಡಿದ್ದಾರೆ.
ಗ್ರಾಪಂ ಕೊಠಡಿಗಳ ಮಾರ್ಪಾಡಿನ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಅಧ್ಯಕ್ಷರು, ಪಿಡಿಒಗೆ ಸೂಚಿಸುತ್ತೇನೆ. -ಶಶಿಧರ್.ಕೆ.ಜೆ ಹೆಬ್ರಿ ತಾಲೂಕು, ಇಒ ಏಲಂನಲ್ಲಿ ಪಡೆದ ಕಟ್ಟಡವನ್ನು ಬೇಕಾಬಿಟ್ಟಿಯಾಗಿ ಮಾರ್ಪಾಡು ಮಾಡಿ ಕಟ್ಟಡದ ಅಂದ ಚಂದವನ್ನು ಕೆಲವರು ಹಾಳು ಮಾಡಿದ್ದಾರೆ. ಶೀಘ್ರ ಇದನ್ನು ಸರಿಪಡಿಸದಿದ್ದಲ್ಲಿ ಗ್ರಾಪಂ ಎದುರು ಧರಣಿ ನಡೆಸಲಾಗುವುದು. -ನೀರೆ ಕೃಷ್ಣಶೆಟ್ಟಿ, ಹೆಬ್ರಿ ಗ್ರಾಪಂ ಮಾಜಿ ಅಧ್ಯಕ್ಷ https://www.vijayavani.net/distribution-of-incentives-congratulations https://www.vijayavani.net/light-fishing-illegal