ಹುಬ್ಬಳ್ಳಿ: ಇಲ್ಲಿಯ ಅಗ್ರಹಾರ ತಿಮ್ಮಸಾಗರ ಸರ್ಕಾರಿ ಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾದ ಐದು ಕೊಠಡಿಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇತ್ತೀಚೆಗೆ ಉದ್ಘಾಟಿಸಿದರು.
ಶಾಸಕ ಎಂ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅಂಚಟಗೇರಿ ಗ್ರಾಪಂ ಅಧ್ಯಕ್ಷ ಮಂಜುನಾಥ ಗಾಣಿಗೇರ, ಉಪಾಧ್ಯಕ್ಷೆ ಮಲ್ಲವ್ವ ಜಮ್ಯಾಳ, ಸಹದೇವಪ್ಪ ಮಾಳಗಿ, ಎಸ್ ಡಿಎಂಸಿ ಅಧ್ಯಕ್ಷ ಹನುಮಂತಪ್ಪ ವಾಲಿಕಾರ, ಉಪಾಧ್ಯಕ್ಷ ದಾದಾಪೀರ ಕಠಾರೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ತಾಪಂ ಮಾಜಿ ಅಧ್ಯೆ ಗೌರಮ್ಮ ಹರಿಜನ, ಗೀತಾ ಚವ್ಹಾಣ, ಫಕೀರೇಶ ನಾಗಠಾಣ, ಎಸ್.ಎಸ್. ಶಿರಗೇರಿ, ಶಬಾನಪವಿರ್ನ್, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಗುರುಮಾತೆ ಆರ್.ಎಂ. ದಂಡಿನ ಸ್ವಾಗತಿಸಿದರು. ಎ.ಎನ್. ಬೇವಿನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.