ಗೋಕಾಕ ಅಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಠಾಣಾಧಿಕಾರಿ ಸದಾನಂದ ಮೆಳವಂಕಿ ಚಾಲನೆ ನೀಡಿದರು. ಐ.ಬಿ.ಮುಲ್ತಾನಿ, ವಿ.ಬಿ.ಉಳ್ಳಾಗಡ್ಡಿ, ವಿ.ಆರ್.ಭಾಗೋಜಿ, ಬಿ.ಎಂ.ಪಿರಜಾದೆ, ಎಸ್.ಆರ್.ಪಾಟೀಲ, ಎಸ್.ಆರ್.ಚವ್ಹಾಣ ಇತರರು ಇದ್ದರು. 
ಜಿಲ್ಲೆ

ಸಕಾಲ ಸೇವಾ ಸಪ್ತಾಹದ ಜಾಗೃತಿ ಜಾಥಾಗೆ ಚಾಲನೆ

ಗೋಕಾಕ: ಆಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಸಕಾಲ ವ್ಯಾಪ್ತಿಯಲ್ಲಿ 5 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಅಗ್ನಿಶಾಮಕ ಠಾಣಾಧಿಕಾರಿ ಸದಾನಂದ ಮೆಳವಂಕಿ ಹೇಳಿದರು.

ನಗರದ ಹೊರವಲಯದಲ್ಲಿರುವ ಆಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರ, ನಿರ್ಮಾಣದ ನಂತರ ಕ್ಲಿಯರೆನ್ಸ್ ಪ್ರಮಾಣ ಪತ್ರ, ಬೆಂಕಿ ಆಕಸ್ಮಿಕವಾಗಿ ತುರ್ತು ಕ್ರಿಯೆಗೆ ಪ್ರತಿಕ್ರಿಯೆ ನೀಡುವುದು, ಪಟಾಕಿಗಳ ಮಾರಾಟ ಲೈಸನ್ಸ್‌ಗೆ ಸಂಬಂಧಿಸಿದ ಸೇವೆಗಳನ್ನು ಸಾರ್ವಜನಿಕರಿಗೆ ಸೇವಾ ಸಿಂಧು ಮೂಲಕ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದರು. ಐ.ಬಿ.ಮುಲ್ತಾನಿ, ವಿ.ಬಿ.ಉಳ್ಳಾಗಡ್ಡಿ, ವಿ.ಆರ್.ಭಾಗೋಜಿ, ಬಿ.ಎಂ.ಪೀರಜಾದೆ, ಎಸ್.ಆರ್.ಪಾಟೀಲ, ಎಸ್.ಆರ್.ಚವ್ಹಾಣ, ಸಿ.ಎಸ್.ಚಿಪ್ಪಲಕಟ್ಟಿ, ಆರ್.ಎನ್.ಕಾಪಸಿ, ಎ.ಎನ್.ಜಗದಾಳ, ಆರ್.ಯು.ಖಿಲಾರಿ ಇತರರು ಇದ್ದರು.