ಜಿಲ್ಲೆ

‘ಟೈಮ್ ಪಾಸ್’ ಚಲನಚಿತ್ರ ಬಿಡುಗಡೆ

ಆರ್.ಕೃಷ್ಣ

ಮೈಸೂರು:  ಇಂದಿನ ಸಮಾಜಕ್ಕೆ ಕನ್ನಡಿ ಹಿಡಿಯುವ ಕಥಾ ಹಂದರ ಹೊಂದಿರುವ ‘ಟೈಮ್ ಪಾಸ್’ ಚಲನಚಿತ್ರ ಅ.17ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ ಎಂದು ನಿರ್ದೇಶಕ ಚೇತನ್ ಜೋಡಿದಾರ್ ತಿಳಿಸಿದರು.

ಚಿತ್ರದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಸುದ್ದಿ ಮಾಡಿದೆ. ನಾಲ್ಕು ಹಾಡುಗಳಿವೆ. ಉತ್ತಮ ವಿಚಾರ ಇರಿಸಿಕೊಂಡು ಚಿತ್ರ ನಿರ್ಮಿಸಲಾಗಿದೆ. ಮನೋರಂಜನೆಯೇ ಕೇಂದ್ರ ಬಿಂದುವಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರ ತಂಡದ ವೈಷ್ಣವಿ ಸತ್ಯನಾರಾಯಣ್, ರಕ್ಷಾ ರಾಮ್, ಇಮ್ರಾನ್ ಪಾಷ, ಓಂ ಶ್ರೀಯಕ್ಷಿತ್ ಇದ್ದರು.