ಚಿತ್ರದುರ್ಗ: ವಾರ್ತಾ ಇಲಾಖೆ ಜಿಲ್ಲಾ ಕಚೇರಿಯಲ್ಲಿ 26 ವರ್ಷಗಳ ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಚಂದ್ರಶೇಖರ್ ಅವರನ್ನು ಗುರುವಾರ ಸನ್ಮಾನಿಸಿ,ಬೀಳ್ಕೊಡಲಾಯಿತು.ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಇಲಾಖೆಯ ಚಿತ್ರದುರ್ಗ,ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು,ಸಿಬ್ಬಂದಿ, ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು,ಪತ್ರಕರ್ತರು,ಒಡನಾಡಿಗಳು ಹಾಗೂ ಚಂದ್ರಶೇಖರ ಅವರ ಪತ್ನಿ ನಾಗಮ್ಮ ಹಾಗೂ ಕು ಟುಂಬ ವರ್ಗದವರು ಭಾಗಿಯಾಗಿದ್ದರು.
ಚಿತ್ರದುರ್ಗ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ,ವಾಹನ ಚಾಲಕರಿಗೆ ಸಮಯ ಪ್ರಜ್ಞೆ,ಪಾಲನೆ ಹಾಗೂ ತಾಳ್ಮೆ ಬಹಳ ಮುಖ್ಯ.ಇವೆಲ್ಲವೂ ಕೂಡ ಚಂದ್ರಶೇಖರ್ ಅವರಲ್ಲಿ ಮೇಳೈಸಿತ್ತು. ಕರ್ತವ್ಯದ ಅವಧಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕರ್ತವ್ಯದಲ್ಲಿ ಸಮಯ ಪಾ ಲನೆಗೆ ಒತ್ತು ನೀಡುತ್ತಿದ್ದ ಅವರ ಗುಣ ಅನುಕರಣೀಯ ಎಂದರು.
ದಾವಣಗೆರೆ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಮಾತನಾಡಿ,26 ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿರುವುದು ಚಂದ್ರಶೇಖರ್ ಬದುಕಿನ ಮಹತ್ವದ ಸಂಗತಿ. ಅವರ ತಮ್ಮ ವೃತ್ತಿಯನ್ನು ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಈ ಸೇವೆಗೆ ಅವರ ಕುಟುಂಬದವರ ಶ್ರಮ,ಬೆಂಬಲವೂ ಬಹಳಷ್ಟಿದೆ. ಪತ್ರಕರ್ತರೊಂದಿಗೆ ಒಳ್ಳೆಯ ಒಡನಾಟದೊಂದಿಗೆ ಉತ್ತಮ ಸೇವೆ ಸಲ್ಲಿಸಿರುವ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ನಿವೃತ್ತ ವಾರ್ತಾಧಿಕಾರಿ ಮಹೇಶ್ವರಯ್ಯ,ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ,ಶ.ಮಂಜುನಾಥ್,ಎಂ.ಎನ್.ಅಹೋಬಲಪತಿ,ಪತ್ರಕರ್ತರ ಸಂಘ ದ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ದಿನೇಶ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿದರು. ಪತ್ರಕರ್ತರಾದ ಟಿ.ಗೋವಿಂದಪ್ಪ,ಬಸವ ರಾಜ್,ನಾಕಿಕೆರೆ ತಿಪ್ಪೇಸ್ವಾಮಿ,ಕಲಾವಿದರಾದ ಆಯಿತೋಳು ವಿರೂಪಾಕ್ಷಪ್ಪ,ಡಿ.ಒ.ಮುರಾರ್ಜಿ, ವಾರ್ತಾ ಇಲಾಖೆ ಸಿಬ್ಬಂದಿ ವೆಂಕಟೇಶ,ವೇ ಣುಗೋಪಾಲ,ತಿಮ್ಮಶೆಟ್ಟಿ,ಬೋರೇಶ್,ಮೊಹಮದ್ ಇಮಾದ್‌ಪಾಷ,ರಘು ,ನಿವೃತ್ತ ನೌಕರ ಎಸ್.ತಿಪ್ಪಯ್ಯ,ಪತ್ರಕರ್ತರು ಇದ್ದರು.