ಜಿಲ್ಲೆ

314ಕ್ಕೂ ಹೆಚ್ಚು ರೈಲುಗಳ ಸಮಯ ಬದಲಾವಣೆ

ಮಂಜುನಾಥ ತಿಮ್ಮಯ್ಯ

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗ 314ಕ್ಕೂ ಹೆಚ್ಚು ರೈಲುಗಳ ಸಮಯವನ್ನು ಪರಿಷ್ಕರಿಸಿದ್ದು, ಅ. 1ರಿಂದಲೇ ಜಾರಿಗೆ ಬಂದಿದೆ.
ಮೈಸೂರು ನಿಲ್ದಾಣದಿಂದ 9 ರೈಲುಗಳ ನಿರ್ಗಮನ ಸಮಯವೂ ಈ ಪರಿಷ್ಕರಣೆಯಲ್ಲಿ ಸೇರಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ರೈಲಿನ ವೇಳಾಪಟ್ಟಿ ಬದಲಾವಣೆಯನ್ನು ಗಮನಿಸಿಕೊಳ್ಳಬೇಕು ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ.ಲೋಹಿತೇಶ್ವರ ತಿಳಿಸಿದ್ದಾರೆ.


ಪರಿಷ್ಕೃತ ರೈಲು ವೇಳಾಪಟ್ಟಿಯನ್ನು ಪರಿಶೀಲಿಸಲು ಪ್ರಯಾಣಿಕರು ((https://swr.indianrailways.gov.in/view_section.jsp?lang=0&id=0,1,808,818,847,1880 ) ಲಿಂಕ್‌ಗೆ ಭೇಟಿ ನೀಡಬಹುದು.

ಮಾಹಿತಿಗಾಗಿ ದೂ.ಸಂ. 139ಕ್ಕೆ ಕರೆ ಮಾಡಬಹುದು.


ರೈಲುಗಳ ಮಾರ್ಗದಲ್ಲಿನ ಮಧ್ಯಂತರ ನಿಲ್ದಾಣಗಳಲ್ಲೂ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಗಳನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 17301 ಹಿಂದಿನ ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರಾತ್ರಿ 20.45 ಗಂಟೆಗೆ ಮೈಸೂರಿನಿಂದ ನಿರ್ಗಮಿಸಲಿದೆ. ಜತೆಗೆ, ಈ ರೈಲು ಸೇವೆಯನ್ನು ಬೆಳಗಾವಿವರೆಗೂ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1. ರೈಲುಗಾಡಿ ನಿಲ್ದಾಣದಿಂದ ನಿಲ್ದಾಣದವರೆಗೆ ಮೈಸೂರಿನಿಂದ ಹೊರಡುತ್ತಿದ್ದ ಹಳೆಯ ಸಮಯ ಹೊಸ ಸಮಯ
  2. ಶಿರಡಿ ಎಕ್ಸ್‌ಪ್ರೆಸ್ ಮೈಸೂರು ಶಿರಡಿ 05:30 05:20
  3. ಗೋಲ್ಗುಂಬಜ್ ಎಕ್ಸ್‌ಪ್ರೆಸ್ ಮೈಸೂರು ಪಂಢರಾಪುರ 15:45 15:30
  4. ಸ್ವರ್ಣಜಯಂತಿ ಎಕ್ಸ್‌ಪ್ರೆಸ್ ಮೈಸೂರು ನಿಜಾಮುದ್ದೀನ್ 20:10 19:30
  5. ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್ ಮೈಸೂರು ಬೆಳಗಾವಿ 22:30 20:45
  6. ಮೈಸೂರು - ಚಾ.ನಗರ ಮೈಸೂರು ಚಾಮರಾಜನಗರ 09:15 08:20
  7. ಮೈಸೂರು- ನಂಜನಗೂಡು ಮೈಸೂರು ನಂಜನಗೂಡು 09:35 09:15
  8. ಮೈಸೂರು ಕೊಚ್ಚುವೆಳ್ಳಿ ಮೈಸೂರು ಕೊಚ್ಚುವೆಳ್ಳಿ 12:50 12:45
  9. ವಿಶ್ವಮಾನವ ಎಕ್ಸ್‌ಪ್ರೆಸ್ ಮೈಸೂರು ಬೆಳಗಾವಿ 05:50 05.40
  10. ಚಾ.ನಗರ ಎಕ್ಸ್‌ಪ್ರೆಸ್ ಮೈಸೂರು ಚಾಮರಾಜನಗರ 12:15 12:00