ಜಿಲ್ಲೆ

ನೆರೆ ಹಾವಳಿ ಗ್ರಾಮಗಳಿಗೆ ವಿಪ ಸದಸ್ಯ ಸುನೀಲಗೌಡ ಭೇಟಿ

ತಿಕೋಟಾ: ತಾಲೂಕಿನ ಡೋಣಿ ನದಿ ನೆರೆ ಹಾವಳಿಗೆ ತುತ್ತಾದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಬಲೇಶ್ವರ ತಾಲೂಕಿನ ದಾಶ್ಯಾಳ, ಕೊಟ್ಯಾಳ ಮತ್ತು ಸಾರವಾಡ ಗ್ರಾಮಗಳಿಗೆ ಭೇಟಿ ನೀಡಿ, ನೆರೆ ಹಾವಳಿಯಲ್ಲಿ ಸಿಲುಕಿದ ಪ್ರದೇಶಗಳಲ್ಲಿ ವಸ್ತುಸ್ಥಿತಿ ಅವಲೋಕಿಸಿದರು.

ನಂತರ ಮಾತನಾಡಿದ ಅವರು, ಈ ಹಿಂದೆ ಕೂಡ ಈ ಗ್ರಾಮಸ್ಥರು ಭೀಕರ ಪ್ರವಾಹದಲ್ಲಿ ಸಿಲುಕಿದ್ದರು. ಈಗ ಕರೊನಾ ಕಾಯಿಲೆಯಿಂದ ಸಮಸ್ಯೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೆರೆಹಾವಳಿ ಎದುರಾದರೆ, ಜೀವನ ನಡೆಸುವುದು ಕಷ್ಟವಾಗುತ್ತದೆ. ಅದಕ್ಕೆ ಹಾನಿ ಉಂಟಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಫಲಾನುಭವಿಗೆ ಸೂಕ್ತ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಿಕೋಟಾ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ರಾಠೋಡ, ಬಬಲೇಶ್ವರ ತಹಸೀಲಾರ್ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ಕಂದಾಯ ನಿರೀಕ್ಷಕ ಸುಧೀಂದ್ರ ಗುಮಾಸ್ತೆ, ಗ್ರಾಮ ಲೆಕ್ಕಾಧಿಕಾರಿಗಳಾದ ವಿನಯ ಕುಲಕರ್ಣಿ, ರವಿಪ್ರಕಾಶ ಕಾಂಬಳೆ ಮತ್ತಿತರರಿದ್ದರು.