ವಿಜಯಪುರ: ಬಬಲೇಶ್ವರ ಮತೇತ್ರದಲ್ಲಿ ನೀರಾವರಿ ಜೊತೆಗೆ ಮೂಲ ಸೌಕರ್ಯ, ಗುಣಮಟ್ಟದ ಶಿಣ, ವಿದ್ಯುತ್ ಪೂರೈಕೆ ಮತ್ತು ಕೈಗಾರಿಕೆ ಉತ್ತೇಜನಕ್ಕೆ ಒತ್ತು ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಶನಿವಾರ ಕೆಆರ್ಐಡಿಎಲ್ ವತಿಯಿಂದ 25 ಲ ರೂ. ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಂತರ ತಿಕೋಟಾ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಬಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆಆರ್ಐಡಿಎಲ್ ವತಿಯಿಂದ ತಲಾ 50 ಲ ರೂ. ಗಳ ವೆಚ್ಚದಲ್ಲಿ ಪಟ್ಟಣದ ಅಲ್ಪಸಂಖ್ಯಾತರ ಕಾಲನಿ ಮತ್ತು ಗೈರಾಣ ಕಾಲನಿಯ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಪಪಂ ವತಿಯಿಂದ 112.23 ಲ ರೂ. ಗಳ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಿಕೋಟಾ ಪಟ್ಟಣದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ವಾರ್ಡ್ವಾರು ಬೇಡಿಕೆಗಳನ್ನು ಕ್ರೂಢಿಕರಿಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ವರದಿ ನೀಡಬೇಕು ಎಂದು ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯ ಮಾದರಿಯಲ್ಲಿ ಶಿಣ, ಕೈಗಾರಿಕೆ, ವಿದ್ಯುತ್ ಹಾಗೂ ಮೂಲ ಸೌಕರ್ಯ ೇತ್ರಗಳಲ್ಲಿ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಹೊನವಾಡ ಗ್ರಾಮದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಬಬಲೇಶ್ವರ ಮತೇತ್ರದಲ್ಲಿ ಸಚಿವ ಎಂ.ಬಿ. ಪಾಟೀಲರು ಹಲವು ಕೈಗಾರಿಕೋದ್ಯಮಿಗಳಿಂದ ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಶಿಣ ಒದಗಿಸುತ್ತಿದ್ದಾರೆ ಎಂದು ಹೇಳಿದರು.
ಎರಡೂ ಕಡೇ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಿಸಲಾಯಿತು. ಪಪಂ ಅಧಿಕಾರಿ ರಾವೇಂದ್ರ ನಡುವಿನಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ, ಮುಖಂಡರಾದ ರಾಮಗೊಂಡ ಚಾವರ, ಸಿದ್ದು ಬೆಳಗಾವಿ, ವಿಜಯಕುಮಾರ ಹಿರೇಮಠ, ಅಕ್ಬರ ತಿಕೋಟಿ, ಸಾಬು ಖಂಡೇಕಾರ, ದುಂಡಪ್ಪ ವಾಲಿಕಾರ, ಶ್ರೀಕಾಂತ ಕುಂಬಾರ, ವಿಜುಗೌಡ ಪಾಟೀಲ, ಆರ್.ಬಿ. ದೇಸಾಯಿ, ಭೀಮು ಹಂಗರಗಿ, ಸಂತೋಷ ಕೋಲಾರ, ಮಲ್ಲಿಕಾರ್ಜುನ ಹಂಜಗಿ, ಬಸಯ್ಯಾ ವಿಭೂತಿಮಠ, ಭಾಗೀರಥಿ ತೇಲಿ, ಮಮ್ಮು ಮುಜಾವರ ಮತ್ತಿತರರಿದ್ದರು.