ಹುಬ್ಬಳ್ಳಿ: ದ್ವೆತಮತದ ಸ್ಥಾಪಕರಾದ ಶ್ರೀಮನ್ಮಧ್ವಾಚಾರ್ಯರ 37 ಮಹಾನ್ ಗ್ರಂಥಗಳಲ್ಲಿ 18 ಗ್ರಂಥಗಳಿಗೆ ಉತ್ತಮೋತ್ತಮ ವ್ಯಾಖ್ಯಾನ ಬರೆದು, ಸ್ವತಃ 3 ಉದ್ಗ್ರಂಥಗಳನ್ನು ರಚಿಸಿದ "ಟೀಕಾಚಾರ್ಯ' ಖ್ಯಾತಿಯ ಶ್ರೀ ಜಯತೀರ್ಥರನ್ನು ಮನಸಾ ಸ್ಮರಿಸಿದರೂ ಜ್ಞಾನ ವೃದ್ಧಿಸುತ್ತದೆ, ಏಳೇಳು ಜನ್ಮಗಳು ಸಾರ್ಥಕವಾಗುತ್ತವೆ ಎಂದು ಪಂ. ವಾದಿರಾಜಾಚಾರ್ಯ ಮಠದ ಹೇಳಿದರು.
ಇಲ್ಲಿಯ ನವನಗರದ ವಿಶ್ವ ಮಧ್ವ ಮಹಾ ಪರಿಷತ್ ಆಶ್ರಯದಲ್ಲಿ ಮಳಖೇಡ ನಿವಾಸಿ ಶ್ರೀಜಯತೀರ್ಥರ ಪೂರ್ವಾರಾಧನೆ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು "ಟೀಕಾರಾಯರ' ಗ್ರಂಥಗಳ ಸಂದೇಶ ಕುರಿತು ಮಾತನಾಡಿದರು.
ಶ್ರೀಮನ್ನ್ಯಾಯ ಸುಧಾದಲ್ಲಿಯೇ ಅನೇಕ ಪ್ರತಿಭಾವಂತರು ಶ್ರೀಸತ್ಯಾತ್ಮತಿರ್ಥರೆದುರು ಪರಿಪೂರ್ಣ ಪರೀಕ್ಷೆ ನೀಡಿದ್ದಾರೆ ಎಂದರು.
ಆರಾಧನೆ ಪ್ರಯುಕ್ತ ಜು. 19ರಿಂದ 23ರ ವರೆಗೆ ವಿಷ್ಣುತಿರ್ಥರ ರಚಿತ ನ್ಯಾಯಸುಧಾ ಸ್ತೋತ್ರಗಳ ಬಗ್ಗೆ ಪಂ. ವೇಣುಗೋಪಾಲಾಚಾರ ಶಿರವಾರ ಪ್ರವಚನ ನೀಡಿದರು.
ಬುಧವಾರ ಬೆಳಗ್ಗೆ ಮಳೆಯ ಸಿಂಚನದೊಂದಿಗೆ ನಡೆದ ನಗರ ಸಂಕೀರ್ತನೆ ಸಡಗರ ಸಂಭ್ರಮಗಳಿಂದ ಕೂಡಿತ್ತು. ದಾರಿಯುದ್ದಕ್ಕೂ ಹಾಡು, ಭಜನೆ, ಮಂತ್ರಘೋಷಗಳು ಮೊಳಗಿದವು.
ಡಾ. ಎಂ.ಎಂ. ಜೋಶಿ ಫಾರ್ಮ ಹೌಸ್ ನಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳ ಜತೆ ಪರಿಷತ್ ಸದಸ್ಯರಿಂದ ಶ್ರೀಜಯತೀರ್ಥ ಸ್ತುತಿ, ವಿಷ್ಣುಸಹಸ್ರನಾಮ ಪಾರಾಯಣ ಸಾಂಗವಾಯಿತು.
ನಂತರ ನಡೆದ "ಜ್ಞಾನ ಸತ್ರ'ದಲ್ಲಿ ಪಂ. ಶ್ರೀನಿಧಿ ಆಚಾರ್ಯ ಹಾಗೂ ಪಂ. ಭೀಮಸೇನಾಚಾರ ಮಳಗಿ ಅವರು ಟೀಕಾರಾಯರ ಅಗಮ್ಯ ಮಹಿಮೆ ಕೊಂಡಾಡಿದರು.
ಶ್ರೀಧರ ಕುಲಕರ್ಣಿ, ನಾರಾಯಣ ಭಾದ್ರಿ ಮಾತನಾಡಿದರು. ಪಂ. ರಮೇಶಾಚಾರ ಹಿಪ್ಪರಗಿ ಅವರು ನೇತೃತ್ವ ವಹಿಸಿದ್ದರು. ಡಾ. ಪಾಂಡುರಂಗ ಗಂಡಮಾಲಿ ದಂಪತಿಯನ್ನು ಅಭಿನಂದಿಸಲಾಯಿತು.
ವಾದಿರಾಜಾಚಾರ ಹುರಳಿ, ರಂಗಾಚಾರ್ಯ ರಾಯಚೂರ, ಶ್ರೀನಿವಾಸಾಚಾರ ವ್ಯಾಸಮುದ್ರಿ, ಗುರುರಾಜ ಕುಲಕರ್ಣಿ, ಮನೋಹರ ಜಹಗೀರದಾರ, ಶರದ ಕುಲಕರ್ಣಿ, ಮುರಳೀಧರ ವಡವಿ, ವಿಷ್ಣುತಿರ್ಥ ಜಹಗೀರದಾರ, ಜಯತೀರ್ಥ ಮುಂಡಗೋಡ, ವಾಮನ ಭಾದ್ರಿ ಇತರರಿದ್ದರು.