ಕೊಡಗು: ಇಲ್ಲಿನ ತೋಟವೊಂದರಲ್ಲಿ ಹುಲಿಯೊಂದು ಕಾಣಿಸಿಕೊಳ್ಳುತ್ತಿರುವುದು ಇದೀಗ ತೋಟದ ಕಾರ್ಮಿಕರ ಕೆಲಸಕ್ಕೆ ಬರಲು ಕೂಡ ಹಿಂಜರಿಯುವಂತಾಗಿದೆ.
ಕೊಡಗಿನ ಸಿದ್ಧಾಪುರ ಸಮೀಪದ ಮಾರ್ಗೊಲ್ಲಿ ತೋಟದಲ್ಲಿ ಒಂದು ವಾರದ ಹಿಂದೆ ಹುಲಿಯೊಂದು ಕಾಣಿಸಿಕೊಂಡಿದ್ದು, ತೋಟದ ಕಾರ್ಮಿಕರು ಮಾತ್ರವಲ್ಲದೆ ಸುತ್ತಮುತ್ತಲ ಪರಿಸರದಲ್ಲೂ ಭಯವನ್ನು ಮೂಡಿಸಿದೆ.
ಕಳೆದೊಂದು ವಾರದಿಂದ ಈ ಪರಿಸರದಲ್ಲಿ ಹುಲಿ ಓಡಾಡುತ್ತಿದ್ದು, ನಾಲ್ಕು ದಿನಗಳ ಹಿಂದೆ ಈ ತೋಟದಲ್ಲಿ ಹುಲಿ ಇದ್ದಿದ್ದನ್ನು ಕಾರ್ಮಿಕರು ಕಂಡಿದ್ದರು. ಇಂದು ಹಾಡಹಗಲೇ ಈ ಹುಲಿ ಮತ್ತೆ ಕಾಣಿಸಿಕೊಂಡಿರುವುದು ಜನರಲ್ಲಿನ ಭೀತಿ ಹೆಚ್ಚಿಸಿದೆ. ಮಾತ್ರವಲ್ಲ, ಇಲ್ಲಿನ ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.