ಜಿಲ್ಲೆ

ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಪತ್ತೆ

ಪ್ರಸಿನ್ ಕೆ.ಆರ್

ಸಿದ್ದಾಪುರ: ಸಮೀಪ ಪಳ್ಳೆಕೆರೆ ಗ್ರಾಮದ ಎ.ಸಿ. ಸುಬ್ಬಯ್ಯ ಅವರ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳಿದ ಸಂದರ್ಭ ಕಾರ್ಮಿಕರು ಹೆಜ್ಜೆ ಗುರುತು ನೋಡಿದ್ದು, ಫೋಟೋ ತೆಗೆದು ಅರಣ್ಯ ಇಲಾಖೆಗೆ ಕಳುಹಿಸಿದಾಗ ಹುಲಿ ಹೆಜ್ಜೆ ಗುರುತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹುಲಿ ಸೆರೆ ಕಾರ್ಯಾಚರಣೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.