ಜಿಲ್ಲೆ

ಹುತ್ಕಂಡ ಭಾಗದಲ್ಲಿ ಹುಲಿ ದಾಳಿ, 3-4 ತಿಂಗಳಲ್ಲಿ 70ಕ್ಕೂ ಅಧಿಕ ಜಾನುವಾರು ಬಲಿ

ಯಲ್ಲಾಪುರ: ತಾಲೂಕಿನ ಹುತ್ಕಂಡ ಭಾಗದಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಹುತ್ಕಂಡ ಸಮೀಪದ ಕುಂಬಾರಮತ್ತಿ ಬಳಿ ಮೇಯಲು ಹೋಗಿದ್ದ ಆಕಳ ಕರುವೊಂದರ ಮೇಲೆ ವ್ಯಾಘ್ರ ದಾಳಿ ಮಾಡಿ ಕೊಂದು ಹಾಕಿದೆ. ಕೆಲವು ತಿಂಗಳುಗಳಿಂದ ಹುಲಿ ಓಡಾಡುತ್ತಿದ್ದು, ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ.

ಕಳೆದ 3-4 ತಿಂಗಳುಗಳಲ್ಲಿ 70ಕ್ಕೂ ಅಧಿಕ ಜಾನುವಾರುಗಳು ವ್ಯಾಘ್ರ ದಾಳಿಗೆ ಬಲಿಯಾಗಿವೆ. ಅರಣ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಹುಲಿ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.