Tie the terrorist's headscarf 
ಜಿಲ್ಲೆ

ಭಯೋತ್ಪಾದಕರ ಹೆಡೆಮುರಿ ಕಟ್ಟಿ

Vijayapura - Desk - Doddanagouda Gudihindin

ಮಹಾಲಿಂಗಪುರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಬುಧವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಶ್ರೀಕಾಂತ ಮಾಗಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಮಾನವೀಯತೆ ಮೇಲೆ ಭೀಕರ ದಾಳಿ ನಡೆದಿದೆ. ಇದು ಅಕ್ಷಮ್ಯ ಅಪರಾಧ. ಕೇಂದ್ರ ಸರ್ಕಾರ ದಾಳಿಯಲ್ಲಿ ಪಾಲ್ಗೊಂಡ ಉಗ್ರರ ಹೆಡೆಮುರಿ ಕಟ್ಟಬೇಕು. ಆಗ ಮಾತ್ರ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು.

ಘಟನೆ ನಡೆದ ಸ್ಥಳದಲ್ಲಿ ಇಸ್ಲಾಮಿಕ್ ಉಗ್ರರಿಂದ ದಾಳಿ ನಡೆದಿರಬಹುದು. ಆದರೆ, ಅಲ್ಲಿರುವ ಸ್ಥಳೀಯ ಮುಸಲ್ಮಾನರು ಗಾಯಾಳುಗಳಿಗೆ ಅಪಾರವಾದ ಸಹಾಯ, ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಮೊಂಬತ್ತಿ ಬೆಳಗಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಪುರಸಭೆ ಸದಸ್ಯ ಶೇಖರ ಅಂಗಡಿ, ರವಿ ಬಿದರಿ, ವಿನೋದ ಶಿಂಪಿ, ವಿಜಯ ಸಬಕಾಳೆ,ಅಬ್ಬು ಬೆಳಗಲಿ, ಸಂಜಯ್ಯ ಸಕ್ರಿ, ಬಸವರಾಜ ಸೋರಗಾವಿ ಇದ್ದರು.