ಜಿಲ್ಲೆ

ಮಹಿಳೆಯರಿಗೆ ವಿವಿಧ ಸ್ಪರ್ಧೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಟೈ ಹುಬ್ಬಳ್ಳಿ ಮತ್ತು ಇನ್ನರವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ "ಮಹಿಳಾ ನಾಯಕಿಯರ ಉದಯ' ಉತ್ಸವ ಅಂಗವಾಗಿ ಜೂನ್ 14ರಂದು ಮಧ್ಯಾಹ್ನ 3.30ಕ್ಕೆ ಇಲ್ಲಿನ ವಿದ್ಯಾನಗರ ಬಿವಿಬಿ ಕ್ಯಾಂಪಸ್ ನಲ್ಲಿರುವ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಹಿಳಾ ಉದ್ಯಮಿಗಳು, ವೃತ್ತಿಪರರು ಮತ್ತು ಎಲ್ಲ ಮಹಿಳೆಯರಿಗಾಗಿ ಇವೆಂಟ್ ಏರ್ಪಡಿಸಲಾಗಿದೆ. ಇದರಲ್ಲಿ ಕೆಫೆ ಮತ್ತು ಬೇಕಿಂಗ್ ಇಂಡಸ್ಟ್ರಿ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಗುವುದು.

ಮಾತನಾಡುವ ಸ್ಪರ್ಧೆ: ಇದರಲ್ಲಿ "ನಿಮ್ಮ ಜೀವನವನ್ನು ಪರಿವರ್ತಿಸಿದ ಅನುಭವ ಅಥವಾ ಪ್ರಯಾಣದ ಅನುಭವ ಹೇಗೆ ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತಂದಿತು' ಎಂಬ ವಿಷಯದ ಮೇಲೆ ಮಾತನಾಡಬಹುದು.

ರೀಲ್ ತಯಾರಿಕೆಯ ವಿಷಯ: "ಇತರರನ್ನು ಸಶಕ್ತಗೊಳಿಸುವ ನನ್ನ ಕೌಶಲಗಳು'. ಈ ಸ್ಪರ್ಧೆಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಗುರಿ ಹೊಂದಿವೆ ಮತ್ತು ಮಹಿಳೆಯರಿಗೆ ಭಾಷಣ ಸ್ಪರ್ಧೆಯ ಮೂಲಕ ವೇದಿಕೆಯ ಭಯ ಹೋಗಲಾಡಿಸಲು ಸಹಾಯ ಮಾಡುತ್ತವೆ. ಈ ಸ್ಪರ್ಧೆಗಳು 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತವಾಗಿವೆ. ಯಾವುದೇ ಪ್ರವೇಶ ಶುಲ್ಕವಿಲ್ಲ.