ಜಿಲ್ಲೆ

ರೈತರಲ್ಲಿ ಆತಂಕ ಮೂಡಿಸಿದ ಗುಡುಗು ಸಹಿತ ಮಳೆ

Shivamogga - Desk - Megha MS

ಆನಂದಪುರ: ಪಟ್ಟಣದ ಸುತ್ತಮುತ್ತ ಮಂಗಳವಾರ ಸಂಜೆ ಗುಡುಗು ಸಹಿತ ಜೋರಾದ ಮಳೆ ಸುರಿದಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಸಂಜೆ ೫.೩೦ರ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ಸಂಜೆ ೬ರಿಂದ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಬಹುತೇಕ ರೈತರು ವಿವಿಧ ಬೆಳೆಗಳ ಕೊಯ್ಲು ಮಾಡಿ ರಾಶಿ ಹಾಕಿದ್ದರು. ಭತ್ತ, ಜೋಳ, ಅಡಕೆ ಮುಂತಾದ ಬೆಳೆಗಳನ್ನು ಒಣಗಿ ಹಾಕಿದ್ದ ರೈತರಲ್ಲಿ ಆತಂಕ ಮನೆಮಾಡಿತ್ತು. ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಟಾರ್ಪಲ್ ಇತ್ಯಾದಿ ಮುಚ್ಚುವ ದೃಶ್ಯ ಕಂಡು ಬಂದಿತು. ಭತ್ತ ಕೊಯ್ಲು ಮಾಡಿ ಗದ್ದೆಯಲ್ಲಿ ಒಣಗಿ ಹಾಕಿದ್ದ ರೈತರು ಭತ್ತ ಮತ್ತು ಒಣ ಹುಲ್ಲಿನ ರಕ್ಷಣೆ ಬಗ್ಗೆ ಆತಂಕ ಸೃಷ್ಟಿಸಿತ್ತು.